ಪುಂಜಾಲಕಟ್ಟೆಯ ಬಸವನಗುಡಿಯಲ್ಲಿ ಸೇವಾಸಿಂಧು ಮತ್ತು ಹಣ ಸಂಗ್ರಾಹಣ ಕೇಂದ್ರ ಉದ್ಘಾಟನೆ

0

ಪುಂಜಾಲಕಟ್ಟೆ : ಬಸವನಗುಡಿಯ ಸಾಲ್ಯಾನ್ ಕಾಂಪೌಂಡ್ ನಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ  ಹೊಸದಾಗಿ  ಪ್ರಾರಂಭಗೊಂಡ  ಸೇವಾಸಿಂಧು ಕೇಂದ್ರ ಮತ್ತು ಹಣ ಸಂಗ್ರಾಹಣ ಕೇಂದ್ರ  ಸೆ. 5ರಂದು  ಉದ್ಘಾಟನೆ ಗೊಂಡಿತು. ಈ ಕಾರ್ಯಕ್ರಮವನ್ನು  ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರು   ರಮೇಶ್ ಶೆಟ್ಟಿ ಮಜಲಿಒಡಿ ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಗುರುವಾಯನಕೆರೆ ಯೋಜನಾಧಿಕಾರಿ ಯಶವಂತ ಎಸ್, ಒಕ್ಕೂಟದ ಅಧ್ಯಕ್ಷರು ಮತ್ತು ತಾಲೂಕು ಜನ ಜಾಗೃತಿ  ವೇದಿಕೆಯ ಸದಸ್ಯರಾದ ಪದ್ಮನಾಭ ಸಾಲ್ಯಾನ್, ಗ್ರಾಮ ಸಮಿತಿಯ ಅಧ್ಯಕ್ಷರು ಗಣೇಶ್ ಆಚಾರ್ಯ, ವಲಯದ ಮೇಲ್ವೀಚಾರಕ ಚಸಂತ ಕುಮಾರ್ ಜಿ, ಬಸವನಗುಡಿಯ ಸೇವಾಪ್ರತಿನಿಥಿಯಾದ ಶ್ರೀಮತಿ ರೋಹಿಣಿ, ಶ್ರೀಮತಿ ಸವಿತ, ಒಕ್ಕೂಟ ಪದಾಧಿಕಾರಿಗಳು, ಸಂಘದ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here