ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ.25 ಡಿವಿಡೆಂಟ್,

0

ಮಡಂತ್ಯಾರು: ಮಡಂತ್ಯಾರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ.6ರಂದು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ಇವರ ಅಧ್ಯಕ್ಷತೆ ಯಲ್ಲಿ ಜರಗಿತು.

 

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ್ ಕೆ. ಎಸ್. , ನಿರ್ದೇಶಕರಾದ ಮಂಜಯ ಶೆಟ್ಟಿ, ರಾಮ ಕೃಷ್ಣ ಹೆಬ್ಬಾರ್,ಸದಾಶಿವ ಶೆಟ್ಟಿ, ವೆಂಕಪ್ಪ ಪೂಜಾರಿ, ಕೇಶವ ಮೂಲ್ಯ, ಸುನಿಂದ್ರ ಪೂಜಾರಿ, ಪ್ರವೀಣ್ ಚಂದ್ರ ಶೆಟ್ಟಿ, ಶ್ರೀಮತಿ ಆಗ್ನೆಸ್ ಎಂ ಫ್ರಾಂಕ್, ಶ್ರೀಮತಿ ಸವಿತಾ ಯು ಬಂಗೇರ, ಗಿರಿಯಪ್ಪ ನಾಯ್ಕ, ಶ್ರಿಮತಿ ಸವಿತಾ ಸುರೇಶ್ ದ.ಕ.ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಚಂದ್ರ ಶೇಖರ್ ಭಟ್ ರಾಸುಗಳ ಬಗ್ಗೆ ಮಾಹಿತಿ ನೀಡಿದರು. ದನಗಳಿಗೆ ಇನ್ಶುರೆನ್ಸ್ ಮಾಡಿಸಿಕೊಳ್ಳಲು ಕರೆ ನೀಡಿದರು. ಇದರಿಂದ ಯಾವುದೇ ಖಾಯಿಲೆಗೆ ತುತ್ತಾಗಿ ದನ ಸತ್ತರೆ ಅದಕ್ಕೆ ಇನ್ಸೂರೆನ್ಸ್ ದೊರೆಯುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ವಿಸ್ತರಣಾಧಿಕಾರಿ ರಾಜೇಶ್ ಕಾಮತ್, ಗ್ರಾಮ ಪಂಚಾಯತ್ ಸದಸ್ಯರು ಗಳಾದ ಶೈಲೇಶ್ ಕುಮಾರ್, ಕಿಶೋರ್ ಶೆಟ್ಟಿ, ಹರೀಶ್ ಶೆಟ್ಟಿ ಪದೆಂಜಿಲ, ಉಮೇಶ್ ಸುವರ್ಣ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕಾಂತಪ್ಪ ಗೌಡ ಹಟ್ಟತೋಡಿ , ಮಾಜಿ ಉಪಾಧ್ಯಕ್ಷ ಸಂಜೀವ ಶೆಟ್ಟಿ ಉರೆಸಾಗು , ಗ್ರಾಮ ಪಂಚಾಯತ್ ಸದಸ್ಯರು , ಸಿಬಂದಿಗಳು ಉಪಸ್ಥಿತರಿದ್ದರು.

ಕಾರ್ಯದರ್ಶಿ ಜಿ.ಬಾಲಕೃಷ್ಣ ವರದಿ ಮಂಡಿಸಿದರು. ಅಶೋಕ್ ಗುಂಡಿಯಲ್ಕೆ ಕಾರ್ಯಕ್ರಮ ನಿರೂಪಿಸಿದರು. ಸಂಘದಲ್ಲಿ 2021-2 2ಸಾಲಿನಲ್ಲಿ ಒಟ್ಟು ರೂ. 1207848 ಲಕ್ಷ ಲಾಭ ಗಳಿಸಿ ಸದಸ್ಯರಿಗೆ ಷೇರು ಡಿವಿಡೆಂಟ್ 25% ಬೋನಸ್ 65% ಘೋಷಿಸಲಾಯಿತು.

LEAVE A REPLY

Please enter your comment!
Please enter your name here