ಬೆಳ್ತಂಗಡಿ: ನೂತನ ಗಣೇಶ್ ಕ್ಲಿನಿಕಲ್ ” ಹಾರ್ಮೋನ್ ಎನಾಲಿಸಿಸ್” ಲ್ಯಾಬೋರೇಟರಿ ಉದ್ಘಾಟನೆ

0

ಬೆಳ್ತಂಗಡಿ:   ಇಲ್ಲಿ ನೂತನವಾಗಿ   ಗಣೇಶ್ ಕ್ಲಿನಿಕಲ್ ಲ್ಯಾಬೋರೇಟರಿ “ಹಾರ್ಮೋನ್ ಎನಾಲಿಸಿಸ್ ”  ಎಂಬ ಇನ್ಸ್ಟ್ರುಮೆಂಟ್ ನ್ನು ಸೆ.06 ರಂದು ಉದ್ಘಾಟಿಸಲಾಯಿತು.

ಉದ್ಘಾಟನೆಯನ್ನು ಕಟ್ಟಡದ ಮಾಲೀಕ ಡಾ.ಶಶಿಕಾಂತ ಡೊಂಗ್ರೆ ಹಾಗೂ ಬೆನಕ ಹೆಲ್ತ್ ಸೆಂಟರ್ ಡೈರೆಕ್ಟರ್ ಡಾ. ಗೋಪಾಲಕೃಷ್ಣ ಭಟ್ ಇವರು ನೆರವೇರಿಸಿದರು.ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆ ಅಧೀಕ್ಷಕ ಡಾ. ಮುರಳೀಕೃಷ್ಣ ಇರ್ವತ್ರಾಯ ಶುಭ ಹಾರೈಸಿದರು.   ಪ್ರಯೋಗಾಲಯ ಮಾಲಕ ಶಿತಿಕಂಠ ಭಟ್ ಉಜಿರೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ನೂತನ ಯಂತ್ರದಲ್ಲಿ ಎಲ್ಲಾ  ಪರೀಕ್ಷೆ ಗಳನ್ನು ಕ್ಲಪ್ತ  ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದರು.

LEAVE A REPLY

Please enter your comment!
Please enter your name here