ದೇಶದೆಲ್ಲೆಡೆ ಸರ್ಕಾರಿ ಶಾಲೆ ಮೇಲ್ದರ್ಜೆಗೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ದೇಶದ ಶಿಕ್ಷಣ ವಲಯಕ್ಕೆ ಹೊಸ ಸ್ಪರ್ಶ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ದೇಶದ 14500 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಮೇಲ್ದರ್ಜೆಗೇರಿಸುವ ಪಿಎಂಶ್ರೀ (ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಎಂಬ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಕಟಿಸಿದೆ. ಶಿಕ್ಷಕರ ದಿನಾಚರಣೆ ದಿನವಾದ ಸೆ.5 ರಂದು ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿದ್ದಾರೆ.
ವಿಶೇಷತೆ:-
*ಅತ್ಯಾಧುನಿಕ ಮೂಲಸೌಕರ್‍ಯ
*ಸುಸಜ್ಜಿತ ಪ್ರಯೋಗಾಲಯಗಳು
*ತಂತ್ರಜ್ಞಾನಾಧರಿತ ಸ್ಮಾರ್ಟ್‌ಕ್ಲಾಸ್
*ವಿಶಾಲ ಗ್ರಂಥಾಲಯ ಸೌಲಭ್ಯ
*ಎಲ್ಲಾ ಮಾದರಿ ಕ್ರೀಡೆಗೆ ಸೌಲಭ್ಯ
*ಅನ್ವೇಷಣೆ ಕೇಂದ್ರಿತ ಕಲಿಕೆ
*ಪರಿಸರ ಸ್ನೇಹಿ ವ್ಯವಸ್ಥೆ ಅಳವಡಿಕೆ
*ಇಂಧನಕ್ಷಮತೆ ಮೂಲ ಸೌಕರ್ಯ
