ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಸಾಧಕ ಶಿಕ್ಷಕರಿಗೆ ಗೌರವಾರ್ಪಣೆ

0

ಬೆಳ್ತಂಗಡಿ: ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಸಾಧಕ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಸೆ.6ರಂದು ಲಯನ್ಸ್ ಭವನದಲ್ಲಿ ಜರಗಿತು.ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ದೇವಿಪ್ರಸಾದ್ ಬೊಲ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕರಾಗಿ ರಾಜ್ಯಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದ ಬಂಗಾಡಿ ಶಾಲೆಯ ಅಮಿತಾನಂದ ಹೆಗ್ಡೆ. ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದ ನೆಕ್ಕಿಲು ಶಾಲೆಯ ಬಸನ ಗೌಡ ಬಿರಾದರ್. ಕೊಯ್ಯೂರು ಶಾಲೆಯ ರಾಮಚಂದ್ರ ದೊಡ್ಡಮನಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಮಾರಂಭದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ವಸಂತ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷರಾದ ಹೇಮಂತ್ ರಾವ್. ಕಾರ್ಯದರ್ಶಿ ತುಕರಾಮ್, ಕೋಶಾಧಿಕಾರಿ ಪಂಚಾಕ್ಷರಪ್ಪ ಉಪಸ್ಥಿತಿರದ್ದರು.  ಕೃಷ್ಣಾಚಾರ್ಯ ಅವರು ಶಿಕ್ಷಕರ ಪರಿಚಯವಿತ್ತರು.

LEAVE A REPLY

Please enter your comment!
Please enter your name here