ಲಯನ್ಸ್ ಪ್ರಾಂತೀಯ ಸಮ್ಮೇಳನ ಸಮಿತಿಯ ಅಧ್ಯಕ್ಷರಾಗಿ ರಾಜು ಶೆಟ್ಟಿ ಆಯ್ಕೆ

0

ಬೆಳ್ತಂಗಡಿ: ಲಯನ್ಸ್ ಜಿಲ್ಲೆ 317ಡಿ ಯ ಲಯನ್ ವಸಂತ್ ಶೆಟ್ಟಿ ಶ್ರದ್ಧಾ ಅಧ್ಯಕ್ಷರಾಗಿರುವ ಪ್ರಾಂತ್ಯ  5ರ ಪ್ರಾಂತಿಯ ಸಮ್ಮೇಳನ ಸಮಿತಿ ರಚನೆ ಸಭೆಯು ಬೆಳ್ತಂಗಡಿ ಲಯನ್ಸ್ ಕ್ಲಬ್ ವಠಾರದಲ್ಲಿ ಜರಗಿತು.

ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷರಾಗಿ ರಾಜು ಶೆಟ್ಟಿ ಬೆಂಗೇತ್ಯಾರು, ಕಾರ್ಯಾಧ್ಯಕ್ಷರಾಗಿ ಹೇಮಂತ್ ರಾವ್ ಏರ್ಡೂರು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ, ಕೋಶಾಧಿಕಾರಿಯಾಗಿ ಸುರೇಂದ್ರ ಎಸ್, ಕಾರ್ಯದರ್ಶಿಗಳಾಗಿ ಅನಂತಕೃಷ್ಣ, ದತ್ತಾತ್ರಯ ಜಿ. ಆಯ್ಕೆಯಾದರು.

ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಎಂ. ಜಿ. ಶೆಟ್ಟಿ, ಗೌರವ ಸಲಹೆಗಾರರಾಗಿ ಪ್ರಕಾಶ್ ಶೆಟ್ಟಿ ನೊಚ್ಚ, ವಿ. ಆರ್. ನಾಯಕ್, ನಿತ್ಯಾನಂದ ನಾವರ, ಒಸ್ವಾಲ್ಡ್ ಡಿಸೋಜ, ಗೌರವ ಮಾರ್ಗದರ್ಶಕರಾಗಿ ಪ್ರವೀಣ್ ಕುಮಾರ್ ಇಂದ್ರ, ಸಲಹೆಗಾರರಾಗಿ ಪ್ರಾಂತ್ಯ ವ್ಯಾಪ್ತಿಯ ಎಲ್ಲಾ ಮಾಜಿ ಪ್ರಾಂತ್ಯ ಅಧ್ಯಕ್ಷರುಗಳು ಹಾಗೂ ಮಾಜಿ ವಲಯಧ್ಯಕ್ಷರುಗಳು ಆಯ್ಕೆಯಾದರು. ಉಪಾಸಮಿತಿಗಳಿಗೂ ಸಂಚಾಲಕ, ಸಹ ಸಂಚಾಲಕರನ್ನು ಸಭೆಯಲ್ಲಿ ಆಯ್ಕೆಗೊಳಿಸಲಾಯಿತು. ವೇದಿಕೆಯಲ್ಲಿ ಪ್ರಾಂತ್ಯ ಅಧ್ಯಕ್ಷ ವಸಂತ್ ಶೆಟ್ಟಿ ಶ್ರದ್ದಾ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ, ವಲಯಾಧ್ಯಕ್ಷ ಜೇಮ್ಸ್ ಮೆಂಡ, ಲಯನ್ಸ್ ಕ್ಲಬ್ ಮುಚ್ಚುರು ನೀರುಡೆ ಅಧ್ಯಕ್ಷ ಸ್ಟಾನಿ ಮಿರಂಡಾ, ಲಯನ್ಸ್ ಕ್ಲಬ್ ಗುರುಪುರ ಅಧ್ಯಕ್ಷ ಮೇಲ್ವಿನ್ ಸಾಲ್ದಾನ, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ತುಕಾರಾಮ್ ಬಿ. ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಾಂತ್ಯದ ವಿವಿಧ ಕ್ಲಬ್ ಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here