ಬೆಳ್ತಂಗಡಿ: ಜೆಸಿಐ ಮಂಜುಶ್ರೀಯಲ್ಲಿ ಶಿಕ್ಷಕರ ದಿನಾಚರಣೆ, ಗೌರವಾರ್ಪಣೆ

0

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜು ಶ್ರೀಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಜೆಸಿಐ ಬೆಳ್ತಂಗಡಿ ಸದಸ್ಯರಾಗಿರುವ ಶಿಕ್ಷಕರನ್ನು ಗುರುತಿಸುವ ಕಾರ್ಯಕ್ರಮವನ್ನು ಸೆ.6 ರಂದು ಹಮ್ಮಿಕೊಳ್ಳಲಾಯಿತು.

ಚಂದ್ರಹಾಸ್ ಬಳಂಜ ಶಿಕ್ಷಕರ ದಿನಾಚರಣೆ ಹಾಗೂ ಮಹತ್ವದ ಬಗ್ಗೆ ಮಾತನಾಡಿದರು.

ಜೆಸಿಐ ಭಾರತದ ವಲಯ ತರಬೇತುದಾರರಾಗಿ ಬೆಳ್ತಂಗಡಿ ಮಂಜುಶ್ರೀಯಿಂದ ಆಯ್ಕೆಗೊಂಡ ಶಂಕರ್ ರಾವ್, ಸುಧೀರ್ ಕೆ.ಎನ್, ರಂಜಿತ್ ಹೆಚ್.ಡಿ, ಹೇಮಾವತಿ,ಸುಭಾಷಿಣಿ ಇವರುಗಳನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಪ್ರಸಾದ್ ಬಿ.ಎಸ್, ಪೂರ್ವಧ್ಯಕ್ಷ ಚಿದಾನಂದ ಇಡ್ಯಾ, ಉಪಾಧ್ಯಕ್ಷ ಪ್ರೀತಮ್ ಶೆಟ್ಟಿ, ಸದ್ಯಸರುಗಳಾದ ಅನುದೀಪ್ ಜೈನ್, ಸೃಜನ್ ಆರ್ ರೈ, ಅರಿಯಂತ್ ಜೈನ್, ಕಾರ್ಯಕ್ರಮ ಸಂಯೋಜಕ ರಕ್ಷಿತ್ ಅಂಡಿಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here