ದುರುಪಯೋಗ ಪ್ರಕರಣ: ಗ್ರಾಮಕರಣಿಕ ಜಯಚಂದ್ರ ಬಂಧನ

0

ಬೆಳ್ತಂಗಡಿ: ಕಂದಾಯ ಇಲಾಖೆಯ ದಾಖಲೆ ದುರುಪಯೋಗ ಪ್ರಕರಣದ ಆರೋಪದಲ್ಲಿ ಗ್ರಾಮ ಕರಣಿಕರೋರ್ವರನ್ನು ಬಂಧಿಸಿದ ಘಟನೆ ಸೆ.7ರಂದು ವರದಿಯಾಗಿದೆ.

ಬೆಳ್ತಂಗಡಿ ಹೋಬಳಿ ವ್ಯಾಪ್ತಿಗೆ ಒಳಪಟ್ಟ ತಣ್ಣೀರುಪಂತ, ಪುತ್ತಿಲ, ಬಾರ್ಯ, ಕರಾಯ ಗ್ರಾಮದ ಗ್ರಾಮಕರಣಿಕರಾದ ಜಯಚಂದ್ರ ಅವರು ಬಂಧನಕೊಳಗಾಗಿದ್ದು, ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಂದಾಯ ಇಲಾಖೆಯ ದಾಖಲೆಯನ್ನು ದುರುಪಯೋಗ ಪಡಿಸಿ, ವಂಚಿಸಿದ ದೂರಿನ ಹಿನ್ನಲೆಯಲ್ಲಿ ಅವರ ಮೇಲೆ ಕೇಸು ದಾಖಲಾಗಿದ್ದು, ಸೆ.7ರಂದು ಜಯಚಂದ್ರ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here