ಸುಲ್ಕೇರಿ ಗ್ರಾ.ಪಂ ನಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ತರಬೇತಿ ಕಾರ್ಯಾಗಾರ

0

ಸುಲ್ಕೇರಿ:  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ” ಜಲ್ ಜೀವನ್ ಮಿಷನ್ ” ಯೋಜನೆ ಯಡಿಯಲ್ಲಿ  ಸುಲ್ಕೆರಿ ಗ್ರಾಮ ಪಂಚಾಯತ್ ನಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ತರಬೇತಿ ಕಾರ್ಯಾಗಾರ ಸೆ.5ರಂದು  ಆಯೋಜಿಸಲಾಗಿತ್ತು.

ಈ ತರಬೇತಿ ಯಲ್ಲಿ ಸುಲ್ಕೇರಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ನಾರಾಯಣ ಪೂಜಾರಿ ,ಪಂಚಾಯತ್ ಕಾರ್ಯದರ್ಶಿ ಕೊರಗಪ್ಪ ನಾಯ್ಕ ಮತ್ತು ಅನುಷ್ಟಾನ ಬೆಂಬಲ ಸಂಪನ್ಮೂಲ ಸಂಸ್ಥೆ ಯ ಸಿಬ್ಬಂದಿ ವಿಶಾಲಾಕ್ಷಿ ನೀರಿನ ಗುಣಮಟ್ಟದ ಪರೀಕ್ಷೆಯ ತರಬೇತಿ ನೀಡಿದರು.

ಪಂಚಾಯತ್ ಸದಸ್ಯರು, ಹಾಗೂ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ಒಟ್ಟು ಸೇರಿ 29ಮಂದಿ ಭಾಗವಹಿದ್ದರು.

 

LEAVE A REPLY

Please enter your comment!
Please enter your name here