ತಾಲೂಕಿನಾದ್ಯಂತ ಕ್ರೈಸ್ತ ಬಾಂಧವರಿಗೆ ತೆನೆ ಹಬ್ಬ, ಮರಿಯಮ್ಮ ಹುಟ್ಟು ಹಬ್ಬ ಆಚರಣೆ

0

ಬೆಳ್ತಂಗಡಿ : ಕರಾವಳಿ ಕ್ರೆಸ್ಥರಿಗೆ  ಸೆ.8 ರಂದು ತೆನೆ ಹಬ್ಬ ,ಮರಿಯಮ್ಮ  ಹುಟ್ಟು ಹಬ್ಬ (ಮೊಂತಿ ಹಬ್ಬ) ತಾಲೂಕಿನಾದ್ಯಂತ ಆಚರಿಸಲಾಯಿತು.

ಕಳೆದ ಆ.30ರಿಂದ ಎಲ್ಲಾ ಚರ್ಚ್ ಗಳಲ್ಲಿ 9ದಿನದ ನೋವೆನ ನಡೆದು ಭಕ್ತಿಯಿಂದ ಬಲಿ ಪೂಜೆಯಲ್ಲಿ ಪಾಲ್ಗೊಂಡು ಮರಿಯಮ್ಮಳ ಮೂರ್ತಿಗೆ ವಿವಿಧ ಕಡೆಯಿಂದ ಸಂಗ್ರಹಿಸಿದ ಹೂ ವನ್ನ ಅರ್ಪಿಸಿ ಇಂದು ಹಬ್ಬದ ವಿಶೇಷ ಪೂಜೆ ನಡೆಯಿತು.

ಬಳಿಕ ಎಲ್ಲಾ ಭಕ್ತಾದಿಗಳಿಗೆ ತೆನೆಯನ್ನು ವಿತರಿಸಲಾಯಿತು. ಎಲ್ಲರಿಗೂ ಫಲಾಹಾರ ವ್ಯವಸ್ಥೆ ಮಾಡಲಾಗಿತ್ತು. ನಂತರ ಕಬ್ಬು ವಿತರಿಸಲಾಯಿತು. ಧನ ಸಹಾಯ ಮಾಡಿದ ದಾನಿ ಗಳಿಗೆ ಮೊಂಬತ್ತಿ ವಿತರಿಸಿ ತಮ್ಮ ತಮ್ಮ ಮನೆಯಲ್ಲಿ ವಿವಿಧ ಬಗೆಯ ತರಕಾರಿಯೊಂದಿಗೆ ಕುಟುಂಬ ಸಮೇತರಾಗಿ ಒಟ್ಟು ಸೇರಿ ಸಸ್ಯಹಾರಿ ಭೋಜನ ನಡೆಯುತ್ತದೆ.

ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ವ. ಫಾ. ಐವನ್ ಮಾಡ್ತಾ ದಿವ್ಯ ಬಲಿ ಪೂಜೆ ಅರ್ಪಿಸಿ ಆಶೀರ್ವದಿಸಿ ಸಂದೇಶ ನೀಡಿದರು. ವ. ಫಾ.ಜೆಮ್ಸ್ ಡಿಸೋಜ, ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು ವ. ಫಾ. ವಿಜಯ್ ಲೋಬೊ, ವ. ಫಾ. ವಲೇರಿಯನ್ ಸಿಕ್ವೇರಾ ಸಹಕರಿಸಿದರು.

LEAVE A REPLY

Please enter your comment!
Please enter your name here