
ಓಡಿಲ್ನಾಳ: ಬೆಳ್ತಂಗಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಓಡಿಲ್ನಾಳ ಗುರುವಾಯನಕೆರೆ ಮತ್ತು ಪುಂಜಾಲಕಟ್ಟೆ ವಲಯದ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಸೆ 6ರಂದು ಓಡಿಲ್ನಾಳ ಶಾಲೆಯಲ್ಲಿ ಜರುಗಿತು ಕುವೆಟ್ಟು ಗ್ರಾ ಪಂ ಅಧ್ಯಕ್ಷೆ ಆಶಾಲತಾ ದೀಪ ಬೆಳಗಿಸಿ ಉದ್ಘಾಟಿಸಿದರು.

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ರಘರಾಮ್ ಭಟ್ ಮಠ ಕ್ರೀಡಾಂಗಣ ಉದ್ಘಾಟಿಸುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರುದೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುವೆಟ್ಟು ಗ್ರಾ ಪಂ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಸದಸ್ಯರಾದ ಲಕ್ಷ್ಮಿ ಕಾಂತ್ ಮೂಡೈಲು, ಭಾರತಿ ಶೆಟ್ಟಿ, ಆನಂದಿ, ಪುಂಜಾಲಕಟ್ಟೆ ಸಿ ಆರ್ ಪಿ ಚೇತನ್, ಶಾಲಾ ನಿವೃತ ಮುಖ್ಯ ಶಿಕ್ಷಕ ದತ್ತಾತ್ರೇಯ ಗೊಲ್ಲ ಕೆ ಪಿ ಎಸ್, ಪುಂಜಾಲಕಟ್ಟೆ ನಿವೃತ ಮುಖ್ಯ ಶಿಕ್ಷಕ ಮೋನಪ್ಪ ಕೆ, ಕರ್ನಾಟಕ ರಾ ಸ ನೌಕರರ ಸಂಘ ಬೆಳ್ತಂಗಡಿ ಅಧ್ಯಕ್ಷ ಜಯರಾಜ್ ಜೈನ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರವಿ ರಾಜ್ ಗೌಡ, ಶಾಲಾ ಮುಖ್ಯ ಶಿಕ್ಷಕಿ ಉಷಾ ಪಿ, ದೈಹಿಕ ಶಿಕ್ಷಕ ನಿರಂಜನ್, ಮತ್ತಿತರರು ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಎಡ್ವರ್ಡ್ಸ್ ಡಿಸೋಜ ಹಾಗೂ ಶಿಕ್ಷಣ ಸಾರಥಿ ಪ್ರಸಸ್ತಿ ವಿಜೇತ ಸಿ ಆರ್ ಪಿ ರಾಜೇಶ್ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಶಾರದಮಣಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಸ್ವಾಗತಿಸಿ ಸಹ ಶಿಕ್ಷಕಿ ಲಿನೆಟ್ ಲೋಬೋ ವಂದಸಿದರು.
ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ ಮುಖ್ಯ ಶಿಕ್ಷಕ ಕರುಣಾಕರ ಜೆ ಉಚ್ಚಿಲ, ವಿಮುಕ್ತಿ ಸ್ವ ಸಹಾಯ ಸಂಘದ ಮಾಜಿ ಅಧ್ಯಕ್ಷೆ ಜುಲಿಯಾನ್ ಪಾಯಿಸ್, ಹಿರಿಯ ವಿಧ್ಯಾರ್ಥಿ ಸಂಘದ ಕಾರ್ಯದರ್ಶಿ ಸತೀಶ್ ದೇವಾಡಿಗ , ಕೆ ಪಿ ಎ ಪುಂಜಾಲಕಟ್ಟೆಯ ಮುಖ್ಯ ಶಿಕ್ಷಕ ಸುರೇಶ್ ಶೆಟ್ಟಿ, ಎ ಸ್ ಡಿ ಎಂ ಸಿ ಉಪಾಧ್ಯಕ್ಷರು ಸರ್ವಸದಸ್ಯರು ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.
ಕಬಡ್ಡಿ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಪ್ರಥಮ ಮಾಲಾಡಿ ದ್ವಿತೀಯ ಕೊರಂಜ, ಬಾಲಕರ ವಿಭಾಗದಲ್ಲಿ ಪ್ರಥಮ ಕೆ ಪಿ ಎಸ್ ಪುಂಜಾಲಕಟ್ಟೆ, ದ್ವಿತೀಯ ಮೊರಾರ್ಜಿ ಮಚ್ಚಿನ, ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.