ಬಳಂಜ: ಅಟ್ಲಾಜೆ ಕ್ರಿಕೆಟರ್ಸ್ ವತಿಯಿಂದ 8 ತಂಡಗಳ ಕ್ರಿಕೆಟ್ ಪಂದ್ಯಾಟ ಅಟ್ಲಾಜೆ ಮೈದಾನದಲ್ಲಿ ಜರುಗಿತು. ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯನ್ನು ಯುವ ಉದ್ಯಮಿ ರಾಕೇಶ್ ಹೆಗ್ಡೆ ಬಳಂಜ ನೇರವೇರಿಸಿ ಶುಭಕೋರಿದರು.
ವೇದಿಕೆಯಲ್ಲಿ ಬಳಂಜ ಗ್ರಾ.ಪಂ ಅಧ್ಯಕ್ಷ ಹೇಮಂತ್ ಪೂಜಾರಿ, ಬಳಂಜ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಹಿರಿಯರಾದ ಮಹಾಬಲ ಶೆಟ್ಟಿ ಕಾರ್ಯಣ, ಪ್ರಗತಿಪರ ಕೃಷಿಕರಾದ ಶ್ಯಾಮ್ ಬಂಗೇರ ಪೆರಾಜೆ,ಸತೀಶ್ ಪೂಜಾರಿ ಹೇವ,ಅಳದಂಗಡಿ ಸಿ.ಎ ಬ್ಯಾಂಕ್ ನಿರ್ದೇಶಕ ಗುರುಪ್ರಸಾದ್ ಹೆಗ್ಡೆ,ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಸಂಚಾಲಕ ಹರೀಶ್ ವೈ ಚಂದ್ರಮ, ಬಳಂಜ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಪ್ರವೀಣ್ ಡಿ ಕೋಟ್ಯಾನ್,ಪ್ರಮುಖರಾದ ಸುರೇಶ್ ಪೂಜಾರಿ ಹೇವ,ಪುರಂದರ ಪೂಜಾರಿ ಪೆರಾಜೆ, ಜಗದೀಶ್ ಪೂಜಾರಿ ಪೆರಾಜೆ,ರತ್ನಾಕರ ಶೆಟ್ಟಿ ಪಂಬಾಜೆ,ಪ್ರಶಾಂತ್ ಪೆರಾಜೆ,ಪ್ರಕಾಶ್ ಶೆಟ್ಟಿ ತಾರಿದಡ್ಡ,ಧನರಾಜ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ಪಂದ್ಯಾಟದ ಆಯೋಜಕರಾದ ಲತೇಶ್ ಪೆರಾಜೆ ಸ್ವಾಗತಿಸಿ, ಜಗದೀಶ್ ಬಳಂಜ ನಿರೂಪಿಸಿ, ಪ್ರಣಮ್ ವಂದಿಸಿದರು.
ಅಶಕ್ತ ಕುಟುಂಬಗಳಿಗೆ 4 ಕ್ವಿಂಟಾಲು ಅಕ್ಕಿ ವಿತರಣೆ:
ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಳಿಕೆ ಹಣದಲ್ಲಿ ಅಟ್ಲಾಜೆ ಸಮೀಪದ ಕೆಲವು ಅಶಕ್ತ ಕುಟುಂಬಗಳಿಗೆ 4 ಕ್ವಿಂಟಾಲು ಅಕ್ಕಿ ವಿತರಿಸಲು ಯೋಜನೆ ರೂಪಿಸಲಾಗಿದ್ದು ಶೀಘ್ರದಲ್ಲಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದರು.