ರೋಟರಿ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ

0

ಉಜಿರೆ: ಇಲ್ಲಿಯ ಕಾಶಿಬೆಟ್ಟಿನ ಅರಳಿ ರಸ್ತೆಯಲ್ಲಿರುವ ರೋಟರಿ ಸೇವಾಭವನದಲ್ಲಿ ರೋಟರಿ ಕ್ಲಬ್ ವತಿಯಿಂದ ಸೆ.8 ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಚಿತ್ರ ಕಲಾವಿದ ಗುರುವಾಯನಕೆರೆ ಸರ್ಕಾರಿ ಪ್ರೌಢಶಾಲೆಯ ಚಿತ್ರ ಕಲಾ ಶಿಕ್ಷಕ ವಿ.ಕೆ. ವಿಟ್ಲ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಾಗೂ ರೋಟರಿ ಕ್ಲಬ್ಬಿನಲ್ಲಿರುವ ಎಲ್ಲಾ ಶಿಕ್ಷಕರನ್ನು ಗೌರವಿಸಲಾಯಿತು. ವಿಟ್ಲರವರು ಮಾತನಾಡಿ ಚಿತ್ರಕಲೆ ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸಿ ಮನಸ್ಸನ್ನು ಅರಳಿಸುತ್ತದೆ, ಮಕ್ಕಳ ಕಲಾಪ್ರತಿಭೆಯನ್ನು ಎಳವೆಯಲ್ಲೇ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಎಸ್ ಡಿ ಎಂ ಇಂಗ್ಲಿಷ್ ಮಾಧ್ಯಮ ಶಾಲೆಯ ಇಂಟರಾಕ್ಟ್ ಕ್ಲಬ್ಬಿನ ಅಧ್ಯಕ್ಷ ಆ್ಯನೆಟ್ ಪ್ರಥಮ್ ಆದರ್ಶ ಶಿಕ್ಷಕ ಹೇಗಿರಬೇಕು ಎಂಬ ವಿಷಯದ ಬಗ್ಗೆ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಸನ್ಮಾನಿತ ಶಿಕ್ಷಕರ ಪರವಾಗಿ ಆ್ಯನ್ ದೀಪ್ತಿ ಮಾತನಾಡಿ ಪ್ರಸ್ತುತ ಶಿಕ್ಷಕರಿಗಿರುವ ಸವಾಲುಗಳ ಬಗ್ಗೆ ವಿವರಿಸಿದರು. ಅನ್ ಶ್ರುತಿ ಕಾಂತಜೆ ಪ್ರಾಥಿಸಿದರು. ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್ ಸ್ವಾಗತಿಸಿ, ಅನ್ಸ್ ಕ್ಲಬ್ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ ವಂದಿಸಿದರು. ರೋಟರಿ ಕ್ಲಬ್ ಸದಸ್ಯವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here