ಪೆರೋಡಿತ್ತಾಯಕಟ್ಟೆ ಸ ಉ ಪ್ರಾ ಶಾಲೆಯಲ್ಲಿ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ

0

ಪೆರೋಡಿತ್ತಾಯಕಟ್ಟೆ:  ಸ ಉ ಪ್ರಾ ಶಾಲೆ ಪೆರೋಡಿತ್ತಾಯಕಟ್ಟೆ ಯಲ್ಲಿ ಸೆ.9ರಂದು  ನಾರಾವಿ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ ನಡೆಯಿತು.

ಈ  ಕಾರ್ಯಕ್ರಮದಲ್ಲಿ  ಬಳಂಜ ಗ್ರಾ.ಪಂ ಅಧ್ಯಕ್ಷ  ಹೇಮಂತ್ ರವರು ಅಧ್ಯಕ್ಷತೆಯನ್ನು  ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ವೇದಿಕೆಯಲ್ಲಿ ಪೆರೋಡಿತ್ತಾಯಕಟ್ಟೆ ಶಾಲಾ ಎಸ್ ಡಿಎಂಸಿ ಅಧ್ಯಕ್ಷ ರಘುನಾಥ್ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ಅಲಿ ಮಾರು , ಶಾಲಾ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಹೆಗ್ಡೆ , ಬಳಂಜ ಗ್ರಾಮ ಪಂಚಾಯಿತಿ ಸದಸ್ಯರಾದ  ನಿಜಾಮುದ್ದೀನ್,  ಪ್ರಸನ್ನ, ಲೀಲಾವತಿ, ಬಳಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಶ್ರೀನಿವಾಸ್ , ಪೆರೋಡಿತ್ತಾಯಕಟ್ಟೆ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾದ  ಕಿರಣ್ ಕುಮಾರ್, ನಾರಾವಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ  ಪ್ರಭಾಕರ ನಾರವಿ,ನಾರಾವಿ ವಲಯದ ಕ್ರೀಡಾ ಸಂಯೋಜಕರಾದ ಕೃಷ್ಣಪ್ಪ ಪೂಜಾರಿ ಶಾಲಾ ಮುಖ್ಯ ಶಿಕ್ಷಕಿ  ಪದ್ಮಾವತಿ, ಉಪಸ್ಥಿತರಿದ್ದರು.

ನಾರಾವಿ ವಲಯದ 7 ಬಾಲಕರ ತಂಡ ಬಾಲಕಿಯರ 8 ತಂಡ ಭಾಗವಹಿಸಿದ್ದು, ಕ್ರೀಡಾಂಗಣವನ್ನು ಗಣ್ಯರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪ್ರೇಕ್ಷ ಮತ್ತು ತಂಡದವರು ಪ್ರಾರ್ಥಿಸಿ ಮುಖ್ಯ ಶಿಕ್ಷಕಿ ಪದ್ಮಾವತಿರವರು ಸ್ವಾಗತಿಸಿ ದೈಹಿಕ ಶಿಕ್ಷಣ ಶಿಕ್ಷಕಿ ಸರೋಜರವರು ವಂದಿಸಿದರು.ಶಿಕ್ಷಕಿ ಶುಭ, ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here