ಉಜಿರೆ ವಲಯದ ಭಾವೈಕ ಸಮಿತಿಯ ಸಭೆ

0

ಉಜಿರೆ: ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಮೈರಲ್ಕೆ ಓಡಿಲ್ನಾಳ ಇದರ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬೆಳಾಲು ಮಾಯ ದೇವಸ್ಥಾನದಿಂದ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವರನ್ನು ಓಡಿಲ್ನಾಳ ಗ್ರಾಮದ ಮೈರಲ್ಕೆಗೆ ಕರೆತರುವ ದಿಗ್ವಿಜಯ ಯಾತ್ರೆಗೆ ಉಜಿರೆ ವಲಯದ ಭಾವೈಕ ಸಮಿತಿಯ ಸಭೆಯು ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಲಯ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶರತ್ ಕೃಷ್ಣ ಪಡುವೆಟ್ನಾಯ , ಉಪಾಧ್ಯಕ್ಷ ಮೋಹನ್ ಶೆಟ್ಟಿಗಾರ್, ಪುಷ್ಪಾವತಿ ಆರ್ ಶೆಟ್ಟಿ, ಕಾರ್ಯದರ್ಶಿ ರವಿ ಕುಮಾರ್ ಬರಮೇಲು, ಸದಸ್ಯರಾಗಿ ಅರುಣ್ ಕುಮಾರ್, ರಾಮಣ್ಣ ಗೌಡ, ಭರತ್ ಕುಮಾರ್,  ರವಿ,ಸಂತೋಷ್ ಅತ್ತಾಜೆ, ಪ್ರಶಾಂತ್ ಕುಮಾರ್,  ಕೆ ರಾಮಚಂದ್ರ, ಚಂದ್ರ ರಥಬೀದಿ ,ರಾಜೇಶ್, ಉದಯ ಕುಮಾರ್, ರಾಜಗೋಪಾಲ, ಜಯರಾಮ ಆಚಾರ್ಯ, ಎಸ್ ಮಂಜುನಾಥ, ಪೂವಪ್ಪ, ಪ್ರಕಾಶ್, ಸತೀಶ್ ಅತ್ತಾಜೆ ,ಅರವಿಂದ ಕಾರಂತ್ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜೀರ್ಣೋಧ್ಧಾರ ಸಮಿತಿ ಕಾರ್ಯಾಧ್ಯಕ್ಷ ಎಸ್ ಜಯರಾಮ ಶೆಟ್ಟಿ,  ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಕೇದೆ, ತಾಂತ್ರಿಕ ಸಲಹೆಗಾರ ನಾರಾಯಣ್ ಭಟ್ ನಡುಮನೆ, ಓಡೀಲು ಧರ್ಮೋತ್ಥಾನ ಟ್ರಸ್ಟ್ ನ ಅಧ್ಯಕ್ಷ ವ್ರಷಭ ಆರಿಗ ಪರಾರಿ ಗುತ್ತು ,ಶಾಂತಿರಾಜ್ ಜೈನ್, ದಿನೇಶ್ ಮೂಲ್ಯ ಕೊಂಡೆಮಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here