ಪುಂಜಾಲಕಟ್ಟೆ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟ

0

ಗೇರುಕಟ್ಟೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸ.ಪ್ರೌ ಶಾಲೆ ಗೇರುಕಟ್ಟೆ ಇದರ ಆಶ್ರಯದಲ್ಲಿ ಪುಂಜಾಲಕಟ್ಟೆ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮವ ಗೇರುಕಟ್ಟೆ ಪ್ರೌಢಶಾಲೆಯಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಳಿಯ ಗ್ರಾ.ಪಂ ಉಪಾಧ್ಯಕ್ಷೆ ಕುಸುಮ ಪೂಜಾರಿ ನೆರವೇರಿಸಿದರು.

ಅಧ್ಯಕ್ಷತೆಯನ್ನು ಗ್ರಾ.ಪಂ ಸದಸ್ಯ ದಿವಾಕರ ಮೇದಿನಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಎಸ್ ಡಿಎಂಸಿ ಉಪಾಧ್ಯಕ್ಷ ಪ್ರಕಾಶ್ ಪೂಜಾರಿ, ಹಾ.ಉ.ಸ ಅಧ್ಯಕ್ಷ ಜನಾರ್ಧನ ಗೌಡ, ಗೇರುಕಟ್ಟೆ ಸ.ಪ.ಪೂ ಕಾ ಪ್ರಾಂಶುಪಾಲರಾದ ಪೂರ್ಣಿಮ, ಉಪಪ್ರಾಂಶುಪಾಲರಾದ ಈಶ್ವರಿ, ಮಾಜಿ ಗ್ರಾ.ಪಂ ಅಧ್ಯಕ್ಷ ತುಕರಾಂ ಪೂಜಾರಿ, ಸ್ನೇಹ ಸಂಗಮ ಆಟೋಟ ಚಾಲಕ ಮಾಲಕ ಸಂಗದ ಅಧ್ಯಕ್ಷ ವಸಂತ ಶೆಟ್ಟಿ, ನಿವೃತ್ತ ದೈ.ಶಿ ಶಿಕ್ಷಕ ಹೈದರ್ ಪಡಂಗಡಿ, ಪುಂಜಾಲಕಟ್ಟೆ ವಲಯ ಸಂಯೋಜಕರು ಸುಭಾಶ್ಚಂದ್ರ ಪೂಜಾರಿ, ರಾಜೇಶ್ ಪೆರ್ಮುಡ, ಸ.ಭಾ ಅಧ್ಯಕ್ಷ ಯಾದವ ಗೌಡ, ಎಸ್ ಡಿಎಂಸಿ ಸದಸ್ಯರಾದ ಮಲ್ಲಿಕಾ, ಜ್ಯೋತಿ, ರಾಜೇಂದ್ರ ಕೃಷ್ಣ, ದೈ.ಶಿ ಶಿಕ್ಷಕ ಅಜಿತ್ ಕುಮಾರ್ ಉಪಸ್ಥಿತರಿದ್ದರು.

ಗೇರುಕಟ್ಟೆ ಸ.ಪ್ರೌ. ಶಾಲೆಯ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here