ಕೊಕ್ಕಡ ಪ್ರಾ.ಕೃ.ಪ ಸ ಸಂಘದ ಮಹಾಸಭೆ

0

ಕೊಕ್ಕಡ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸಂಘದ ಸಬಾಭವನದಲ್ಲಿ ಸಂಘದ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪಿ ಯವರ ಅಧ್ಯಕ್ಷತೆಯಲ್ಲಿ ಸೆ.9ರಂದು ಜರುಗಿತು.

ವರ್ಷದಲ್ಲಿ ಈ ಸಂಘವು 26.27 ಕೋಟಿ ಠೇವಣಿ ಹೊಂದಿದ್ದು, ರೂ 31.06 ಕೋಟಿ ಸಾಲ ಹೊರಬಾಕಿ ಇದ್ದು, ವರ್ಷಾಂತ್ಯಕ್ಕೆ ಶೇ.97ರಷ್ಟು ವಸೂಲಾತಿ ಆಗಿರುತ್ತದೆ. ವಾರ್ಷಿಕ ರೂ 183.82 ಕೋಟಿ ವ್ಯವಹಾರ ನಡೆಸಿ ಗರಿಷ್ಠ ರೂ 90,48, 955.97 ಲಕ್ಷ ಲಾಭ ಗಳಿಸಿ ಆಡಿಟ್ ವರ್ಗೀಕರಣದಲ್ಲಿ “ಎ” ತರಗತಿ ಪಡೆದುಕೊಂಡಿದೆ. ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ 2021-22ರಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳಿಗೆ , ಪಿಯುಸಿ ವಿದ್ಯಾರ್ಥಿಗಳಿಗೆ, 2021-22ನೇ ಸಾಲಿನಲ್ಲಿ ಸಂಘದಿಂದ ಅತೀ ಹೆಚ್ಚು ಗೊಬ್ಬರಖರೀದಿಸಿ ಕ್ಯಾಂಪ್ಕೋ ಮೂಲಕ ಅತೀ ಹೆಚ್ಚು ಅಡಿಕೆ ವ್ಯವಹಾರ ಮಾಡಿದ ಸದಸ್ಯರಿಗೆ, ಹಿರಿಯ ರೈತ ಸದಸ್ಯರಿಗೆ ಹಾಗೂ ವಿಶೇಷ ಸಾಧನೆ ಮಾಡಿದ ರೈತರನ್ನು ಗೌರವಿಸಿ ಅಭಿನಂದಿಸಲಾಯಿತು.

ಈ ವೇಳೆ ಸದಸ್ಯರಿಗೆ ಬೆಳೆ ಸಮೀಕ್ಷೆ ಬಗ್ಗೆ ಕೃಷಿ ಅಧಿಕಾರಿ ಚಿದಾನಂದ ಹೂಗಾರ್  ಹಾಗೂ  ಕ್ಯಾಂಪ್ಕೋ ಬಗ್ಗೆ ಜನಾರ್ಧನ ಮಾಹಿತಿ ನೀಡಿದರು.

ಸನ್ಮಾನಿತರ ಪರವಾಗಿ ಸೂರ್ಯ ನಾರಾಯಣ ಶರ್ಮ ಎಲಿಕಳ ಹಾಗೂ ಡೇವಿಡ್ ಡೈಮಿ ಹಳ್ಳಿಗೇರಿ ಮಾತನಾಡಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ.ಪಿ. ಸ್ವಾಗತಿಸಿದರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಕೆ ವಾರ್ಷಿಕ ವರದಿ ಮಂಡಿಸಿದರು. ಗುಮಾಸ್ತ ಸುಂದರ ಗೌಡ ಕೆ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಪದ್ಮನಾಭ ಧನ್ಯವಾದವಿತ್ತರು. ಕಾರ್ಯಕ್ರಮದ ಯಶಸ್ವಿಗೆ ಸಿಬ್ಬಂದಿವರ್ಗದವರು ಸಹಕರಿಸಿದರು.

LEAVE A REPLY

Please enter your comment!
Please enter your name here