ಅಳದಂಗಡಿ ತೋಟಗಾರಿಕಾ ಇಲಾಖೆಯ ವಾರ್ಷಿಕ ಮಹಾಸಭೆ

0

ಅಳದಂಗಡಿ: ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಸಂಘದ 2021-22ನೇ ಸಾಲಿನ “ವಾರ್ಷಿಕ ಮಹಾಸಭೆಯು” ಸೆ.10ರಂದು ಬೆಳ್ತಂಗಡಿಯ ಅನನ್ಯ ಸಭಾಂಗಣದಲ್ಲಿ ಹರಿದಾಸ್ ಎಸ್ ಎಮ್ ಇವರ ಅಧ್ಯಕ್ಷತೆಯಲ್ಲಿ  ಜರುಗಿತು.

ಮಾಜಿ ಶಾಸಕ ಕೆ ವಸಂತ ಬಂಗೇರ ದೀಪ ಬೆಳಗಿಸುವ ಮೂಲಕ ಸ್ಪೂರ್ತಿ ತೆಂಗಿನ ಎಣ್ಣೆಬಿಡುಗಡೆ ಮಾಡಿದರು.

ದ.ಕ ಜಿಲ್ಲಾ ಆಸ್ಪತ್ರೆ ಮತ್ತು ಬೀಡಿ  ಸಹಕಾರಿ ಸಂಘದ ಸಿಓ  ವೈ ಜಯಂತಿ  ವಾರ್ಷಿಕ ವರದಿ ಮಂಡಿಸಿದರು.  ಸುಧಾಕರ್ ಮೈಯ್ಯ ಮತ್ತು ದುಗ್ಗಪ್ಪ ಗೌಡ ಕೃಷಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಪ್ರಭಾಕರ ಮಯ್ಯ, ಸುವರ್ಣಾ ನೂರಿತ್ತಾಯ, ಶಿವಕುಮಾರ್, ಸುಕನ್ಯಾ, ವೆಂಕಟೇಶ್ ಮಯ್ಯ, ಮುಖ್ಯ ಕಾರ್ಯನಿರ್ವಹನಾಧಿಕಾರಿ ಮನೋಹರ್ ಎಚ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹರೀಶ್ ಭಟ್ ಸ್ವಾಗತಿಸಿ, ಶೇಖರ್ ಲಾಯಿಲ  ಧನ್ಯವಾದ ಗೈದರು.

LEAVE A REPLY

Please enter your comment!
Please enter your name here