ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಂಘ ನಿವ್ವಳ ರೂ.76.20 ಲಕ್ಷ ಲಾಭ, ಶೇ.20 ಡಿವಿಡೆಂಡ್ ಘೋಷಣೆ ಪತ್ರಿಕಾ ಗೋಷ್ಠಿ

0


ಉಜಿರೆ : ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಉಜಿರೆ 2021-22 ನೇ ವರದಿ ಸಾಲಿನಲ್ಲಿ 288 ಕೋಟಿ ರೂ ವ್ಯವಹಾರ ಮಾಡಿ 76.20 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ 20% ಡಿವಿಡೆಂಡ್ ಘೋಷಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಜಿ ಭಿಡೆ ತಿಳಿಸಿದರು.

ಅವರು ಸೆ.10 ರಂದು ಉಜಿರೆ ಕೃಷ್ಣಾನುಗ್ರಹ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

2021-22 ನೇ ಸಾಲಿನಲ್ಲಿ ಸಂಘಕ್ಕೆ ರಬ್ಬರು ಮಾರಾಟ ಮಾಡಿದ ಸದಸ್ಯರಿಗೆ ಕಿಲೋ ಒಂದರ ರೂ.1 ರಂತೆ ಗರಿಷ್ಠ 5,000 ಮಿತಿಗೊಳಪಟ್ಟು ಖರೀದಿ ಬೋನಸ್ ನೀಡುವುದಾಗಿ ನಿರ್ಣಯಿಸಲಾಗಿದೆ ಎಂದರು. ಮುಂದಕ್ಕೆ ಸಂಘವು ನಡೆಸುತ್ತಿರುವ ಎಲ್ಲಾ ಖರೀದಿ ಕೇಂದ್ರಗಳನ್ನು ಕಂಪ್ಯೂಟರೀಕರಣಗೊಳಿಸಿ ಆನ್‌ಲೈನ್ ಮಾಡುವುದು, ಸಂಘದ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಹಾಗೂ ತಾಲೂಕಿನ ಹೊರಗಡೆ ಅಗತ್ಯವಿದ್ದಲ್ಲಿ ಸೇವಾ ಕೇಂದ್ರ ತೆರೆಯುವುದು, ಸಂಘದ ಶಾಖೆಗಳಿಗೆ ಸ್ವಂತ ನಿವೇಶನ ಖರೀದಿಸಿ ಸ್ವಂತ ಕಟ್ಟಡ ರಚನೆ ಮಾಡುವುದು, ಸದಸ್ಯರ ಅಪೇಕ್ಷೆಯಂತೆ ರಬ್ಬರು ಹಾಲು ಖರೀದಿಸುವರೇ ಯೋಜನೆ ಹಾಕಿಕೊಂಡಿದ್ದು 2022 ಮೇ ತಿಂಗಳಿನಲ್ಲಿ ಖರೀದಿ ಪ್ರಾರಂಭಿಸಲಾಗಿರುತ್ತದೆ, ರಬ್ಬರು ಮಂಡಳಿಯ ಸಹಯೋಗದೊಂದಿಗೆ ರಬ್ಬರು ಟ್ಯಾಪಿಂಗ್ ತರಬೇತಿ ಶಾಲೆ ಪ್ರಾರಂಭಿಸಲಾಗುವುದು ಎಂದರು.

ಸಂಘದ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ನಿರ್ದೇಶಕರುಗಳಾದ ಪದ್ಮನಾಭ ಮಾನಿಂಜ, ಸೋಮನಾಥ ಬಂಗೇರ, ಗ್ರೇಸಿಯನ್ ವೇಗಸ್, ಇ ಸುಂದರ ಗೌಡ, ಎಚ್. ಪದ್ಮ ಗೌಡ, ಜಯಶ್ರೀ ಡಿ. ಎಂ. , ಭೈರಪ್ಪ, ರಾಮ ನಾಯ್ಕ, ಕೆ ಜೆ. ಆಗಸ್ತಿನ್, ವಿ. ವಿ. ಅಬ್ರಹಾಂ ಬಾಲಕೃಷ್ಣ ಗೌಡ ಕೇರಿಮಾರ್, ಕೆ. ಮೋಹನ, ಅಬ್ರಹಾಂ ಬಿ. ಎಸ್., ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜು ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here