ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ಪಡಂಗಡಿ: ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸೆ.10ರಂದು ಸಂಘದ ಅಧ್ಯಕ್ಷ ಅಂತೋನಿ ಫೆರ್ನಾಂಡೀಸ್ ಇವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರಗಿತು.

ಸಂಘದ ಕಾರ್ಯಕ್ರಮದಲ್ಲಿ ನೂತನ ಕಟ್ಟಡವನ್ನು ಸಾಂಕೇತಿಕವಾಗಿ ಶಾಸಕರ ತಂದೆ ಮುತ್ತಣ್ಣ ಪೂಂಜಾ ಇವರು ತೆಂಗಿನ ಕೊಂಬನ್ನು ಅರಳಿಸುವ ಮೂಲಕ ಉದ್ಘಾಟಿಸಿದರು.

2021-22ಸಾಲಿನಲ್ಲಿ ಒಟ್ಟು 3470ಸದಸ್ಯರು ಹೊಂದಿದ್ದು ರೂ.2,37,80, 321ಕೋಟಿ ಪಾಲುಬಂಡವಾಳ ದೊಂದಿಗೆ ರೂ 1689.64ಲಕ್ಷ ಸಾಲ ವಿತರಿಸಿ 85.89ಲಕ್ಷ ಲಾಭ ಗಳಿಸಿ. ಸಂಘದ ಅಧ್ಯಕ್ಷ ಅಂತೋನಿ ಫೆರ್ನಾಂಡೀಸ್ ರವರು ಸದಸ್ಯರಿಗೆ ಶೇ 14% ಡಿವಿಡೆಂಡ್ ಘೋಷಿಸಿದರು.

ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ 10%ಸದಸ್ಯರಿಗೆ, 4%ನೂತನ ಕಟ್ಟಡದ ಕಟ್ಟಡಕ್ಕೆ ನೀಡುವುದಾಗಿ ಸರ್ವರ ಅಭಿಪ್ರಾಯದ ಮೇರೆಗೆ ವಿತರಿಸಲು ಒಪ್ಪಿಗೆ ನೀಡಿದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ  ಸುಕೇಶಿನಿ ಎ. ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಹಾಗೂ ಆಡಳಿತ ಮಂಡಳಿಯ ಪರಿಚಯ ಮಾಡಿದರು.

ಉಪಾಧ್ಯಕ್ಷ ನರೇಂದ್ರ ಕುಮಾರ್, ನಿರ್ದೇಶಕರಾದ ನಾರಾಯಣ ಮೂಲ್ಯ, ಸಂತೋಷ್ ಶೆಟ್ಟಿ, ರವಿ ಕುಮಾರ್ ಕೆ. ವೈ , ರಾಮು ಪದ್ಮನಾಭ ನಾಯ್ಕ ಸಿ.ಸಿ., ಕೃಷ್ಣಪ್ಪ ಪೂಜಾರಿ, ಉಮೇಶ್,  ಉಷಾ, ಸುನಂದ, ನವೀನ, ವಲಯ ಮೇಲ್ವಿಚಾರಕ ಸಂದೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ  ಮೀನಾಕ್ಷಿ, ಸಂತೋಷ್ ಕುಮಾರ್ ಜೈನ್, ಸಂಪತ್ ಕುಮಾರ್ ಕೊಂಬ, ಅಹ್ಮದ್ ಬಾವ, ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಮ್ಯಕ್ಷಿಮ್ ಸಿಕ್ವೇರಾ, ಗ್ರಾಮ ಕರಣಿಕ ಹರೀಶ್, ಗ್ರಾಮ ಪಂಚಾಯತ್ ಸದಸ್ಯರು, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಗ್ರಾಮಸ್ಥರು ಊರ ಗಣ್ಯರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ನರೇಂದ್ರ ಕುಮಾರ್ ರವರು ಸ್ವಾಗತಿಸಿದರು.ನಿರ್ದೇಶಕರಾದ ಕೃಷ್ಣಪ್ಪ ಪೂಜಾರಿ ವಂದಿಸಿದರು. ಶಿಕ್ಷಕ ಶಿವಶಂಕರ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ಸಹಕಾರಿಯ ನೂತನ ಕಟ್ಟಡ ನಿರ್ಮಿಸಿದ ಇಂಜಿನಿಯರ್, ಬೆಳ್ತಂಗಡಿ ಸಿದ್ಧಿವಿನಾಯಕ ಎಸೋಸಿಯೇಟ್ ಮಾಲಕ ಹಂಸ ರಾಜ್ ಹಾಗೂ ಗುತ್ತಿಗೆದಾರ ತಿಮ್ಮಪ್ಪ ಗುಂಪ್ಪಲಾಜೆ , ಪಡಂಗಡಿ ಸರಕಾರಿ ಶಾಲೆಯ ನಿವೃತ್ತ ಶಾರೀರಿಕ ಶಿಕ್ಷಕ ಹೈದರ್ ಇವರನ್ನು ಗೌರವಿಸಲಾಯಿತು. ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here