ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

0

ಕಲ್ಲೇರಿ: ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸೆ. 10 ರಂದು ಅಂಬೇಡ್ಕರ್ ಭವನ ಕಲ್ಲೇರಿಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಬಿ.ನಿರಂಜನ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ 20 21- 22 ನೇ ಸಾಲಿನಲ್ಲಿ ಸಂಘವು ರೂ.233 ಕೋಟಿ ವ್ಯವಹಾರ ನಡೆಸಿ ರೂ.1.11ಕೋಟಿ ಲಾಭಗಳಿಸಿದೆ. ಸದಸ್ಯರಿಗೆ 12% ಡಿವಿಡೆಂಟ್ ಘೋಷಣೆ ಮಾಡಿದರು. ಬರುವ ಮಹಾ ಸಭೆಯ  ಒಳಗೆ ಸಂಘದ ಶತಮಾನೋತ್ಸವ ಸವಿ ನೆನಪಿಗಾಗಿ ಸಂಘದ ಮುಖ್ಯ ಕಚೇರಿ ಹಿಂಭಾಗದಲ್ಲಿ 1.92 ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಸನ್ಮಾನ: 

ಶಿಕ್ಷಕರಾದ ಯುವರಾಜ್ ಅನಾರು,  ಧರ್ಣಪ್ಪ ನಾಯ್ಕ,  ಕಮಲ, ನಿವೃತ್ತ ಅಂಚೆ ಇಲಾಖೆಯ ಕಾಂತಪ್ಪ ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಂದ್ರ ಪ್ರಸಾದ್  ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ತಾಜುದ್ದೀನ್ , ನಿರ್ದೇಶಕರಾದ ಪೂವಪ್ಪ ಬಂಗೇರ, ರೋಹಿತ್ ಶೆಟ್ಟಿ, ಶ್ರೀಧರ ಗೌಡ,  ಜಯಂತಿ ಪಾಲೇದು, ಓಬಯ್ಯ ಪೂಜಾರಿ,  ಪುಷ್ಪಾಲತಾ, ಶೂರ, ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು.
ನಿರ್ದೇಶಕ ಜಗದೀಶ ಸ್ವಾಗತಿಸಿ. ನಿರ್ದೇಶಕ ಲಿಂಗಪ್ಪ ನಾಯ್ಕ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here