ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘದ ಮಹಾಸಭೆ: ಸದಸ್ಯರಿಗೆ ಶೇ 25% ಡಿವಿಡೆಂಡ್ ಘೋಷಣೆ

0

ಬೆಳ್ತಂಗಡಿ : ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘದ ಮಹಾಸಭೆಯು ಸೆ.10ರಂದು ಬೆಳ್ತಂಗಡಿ ಚರ್ಚ್ ಬಳಿ ಇರುವ ಸಿವಿಸಿ ಸಭಾಂಗಣದಲ್ಲಿ ಜರುಗಿತು.

ಸಂಘದಲ್ಲಿ 2021-22ಸಾಲಿನಲ್ಲಿ ವರ್ಷಾಂತ್ಯಕ್ಕೆ ರೂ.66.39ಕೋಟಿ ಠೇವಣಿ ಸಂಗ್ರಹಿಸಿ, ರೂ.51.50ಕೋಟಿ ಸಾಲ ವಿತರಿಸಿ ರೂ.198.21ಕೋಟಿ ವ್ಯವಹಾರ ಮಾಡಿ ರೂ. 76,57,288.07ಲಕ್ಷ ಲಾಭ ಗಳಿಸಿ. ಸದಸ್ಯರಿಗೆ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ  ಶೇ 25% ಡಿವಿಡೆಂಡ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಘೋಷಿಸಿದರು. ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಸಹಕಾರಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಯಾವುದೆ ಇದ್ದರೂ ಅವರವರ ಆಂತರಿಕ ವಿಷಯ ಎಂದರು.

ಸಭೆಯಲ್ಲಿ ವಿಶೇಷಾಧಿಕಾರಿ ಶಿವಲಿಂಗಯ್ಯ ಎಂ ಭಾಗವಹಿಸಿ ಮಾತನಾಡಿ ಸಂಘದಲ್ಲಿ ಯಾವುದೇ ಅವ್ಯಹವಾರ ನಡೆದಿಲ್ಲ, ಆಡಳಿತ ಮಂಡಳಿ ವಜಾ ಆಗಿದೆ. ಏನಿದ್ದರೂ  ಈಗಾಗಲೇ ದೂರು ನೀಡಿದ್ದಾರೆ ಅದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸದಸ್ಯರು 7ದಿನ ಗಳ ಮುಂಚಿತವಾಗಿ ಲಿಖಿತ ರೂಪದಲ್ಲಿ ದೂರು ಗಳನ್ನು ನೀಡಿದ್ದರು. ಅದಕ್ಕೆ ಉತ್ತರಿಸಿ ಯಾವುದೇ ನ್ಯೂನ್ಯತೆ ಗಳಿದ್ದಲ್ಲಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ನಮ್ಮಲ್ಲಿ ಹಣ ಇರುವಾಗ ಬೇರೆ ಹಣಕಾಸು ಸಂಸ್ಥೆ ಯಿಂದ ಹಣ ಯಾಕೆ ಡೆಪಾಸಿಟ್ ತೆಗೆದುಕೊಳ್ಳುವುದು ಮತ್ತು ನಮ್ಮಲಿದ್ದ ಮೊತ್ತ ವನ್ನು ಬೇರೆ ಹಣಕಾಸು ಸಂಸ್ಥೆ ಯಲ್ಲಿ ಡೆಪಾಸಿಟ್ ಸಹ ಯಾಕೆ ? ಅದೇ ಮೊತ್ತ ದಲ್ಲಿ ಸಾಲ ವಿತರಿಸಬಹುದಲ್ಲ ಎಂದು ಸದಸ್ಯರು ಪ್ರಶ್ನಿಸಿದರು. ಸುಸ್ಥಿ ಸಾಲಗಾರರ ಪಟ್ಟಿ ಪ್ರಕಟಿಸಲು ಸೂಚಿಸಿದರು.

ಅಳದಂಗಡಿ  ವ್ಯವಸ್ಥಾಪಕ ಜೆರೋಮ್ ಡಿಸೋಜಾ ಸ್ವಾಗತಿಸಿದರು. ಬೆಳ್ತಂಗಡಿ ವ್ಯವಸ್ತಾಪಕಿ ಮಲ್ಲಿಕಾ ಮೊನಿಸ್ ನಿರೂಪಿಸಿದರು, ವೇಣೂರು ವ್ಯವಸ್ಥಾಪಕಿ ಶಾಂತಿ ಸಿ. ಡಿ ವಂದಿಸಿದರು.

ಮಹಾಸಭೆಯಲ್ಲಿ ಮಾಜಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು,ನಿರ್ದೇಶಕರುಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here