ಕೆ ಎಸ್ ಎಂ ಸಿ ಎ  ವತಿಯಿಂದ ಕೊಕ್ಕಡ ಅನಾಥಾಶ್ರಮದಲ್ಲಿ ಮದರ್ ತೆರೇಸಾ ಅನುಸ್ಮರಣೆ

0

ಕೊಕ್ಕಡ :ಕರ್ನಾಟಕ ಸಿರೋಮಲಬಾರ್ ಕ್ಯಾಥೋಲಿಕ್ ಅಶೋಸಿಯೇಷನ್ ವತಿಯಿಂದ ವಿನೂತನ ವಾಗಿ ಮದರ್ ತೆರೇಸಾ ಅನುಸ್ಮರಣೆ ಹಾಗೂ ಓಣಂ ಆಚರಣೆಯನ್ನು ವಿಜೃಂಭಣೆ ಯಿಂದ ಕೊಕ್ಕಡ ದ ಫ್ರಾನ್ಸಿಸ್ಕನ್ ಸೇವಾಶ್ರಮದ ಅನಾಥ ರ ಜೊತೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಧರ್ಮ ಗುರುಗಳನ್ನು ಭಗೀನಿಯರನ್ನು ಅವರ ಸೇವೆಗಾಗಿ ಸನ್ಮಾನಿಸಲಾಯಿತು.

ಜೀವನದಲ್ಲಿ ಎಲ್ಲವನ್ನು ಎಲ್ಲರನ್ನು ಕಳೆದುಕೊಂಡ ಬಡ ಮತ್ತು ಅನಾಥರಿಗಾಗಿ ಪ್ರತಿ ಓರ್ವರೂ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ ಮಾನವೀಯತೆ ಮತ್ತು ದೈವಿಕ ಭಾವವನ್ನು ಪ್ರತಿಯೊರ್ವರೂ ಮೈಗೂಡಿಸಿ ಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಕೆ ಎಸ್ ಎಂ ಸಿ ಎ ಯುವ ವಿಬಾಗ ದ ರೋಬಿನ್ ಒಡಂಪಳ್ಳಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಕೆ ಎಸ್ ಎಂ ಸಿ ಎ ಪದಾಧಿಕಾರಿಗಳಾದ  ಸೇಬಾಸ್ಟಿನ್ ಎಂ ಜೆ ಕಾರ್ಯದರ್ಶಿ ಗಳು, ಸೇಬಾಸ್ಟಿನ್ ಪಿ ಸಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಯುವ ವಿಭಾಗದ ರೋಬಿನ್ ಜೈಸನ್ ಜೋಸ್ , ರೇಖಾ ಅಡ್ಡ ಹೊಳೆ ಸ್ಮಿತಾ ಉದನೆ, ಶಿಬು ನೆಲ್ಯಾಡಿ ಸಿಮಿ, ಲಿಸಿ ಆರ್ಲ ಸೋಯಿ ಹಾಗೂ ವಿಭಿನ್ ವೀರಾಂತಾನತ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here