ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಜೆಸಿಐ ಸಪ್ತಾಹ ಉದ್ಘಾಟನೆ ಹಾಗೂ ತರಬೇತಿ ಕಾರ್ಯಕ್ರಮ

0

ಮಡಂತ್ಯಾರು: ಇಲ್ಲಿನ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನಲ್ಲಿ 2022 ನೇ ಸಾಲಿನ ವರ್ಣರಂಜಿತ ಜೆಸಿ ಸಪ್ತಾಹ ಸಂತೃಪ್ತಿ ಇದರ ಉದ್ಘಾಟನಾ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮವು ಸೆ. 10ರಂದು ಜರುಗಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ|ಫಾ|ಬೇಸಿಲ್ ವಾಸ್ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಸಪ್ತಾಹದ ಎಲ್ಲಾ ಕಾರ್ಯಕ್ರಮಕ್ಕೆ ಗಳಿಗೆ ಶುಭ ಹಾರೈಸಿದರು

ವೇದಿಕೆಯಲ್ಲಿ ವಲಯ 15ರ ಸಂಯೋಜಕರಾದ ಜೆಸಿ. ಸೂರಜ್ ಶೆಟ್ಟಿ, ವಲಯ 15ರ ಪ್ರಾವಿಷನಲ್ ತರಬೇತುದಾರರಾದ ಜೆಸಿ. ದೀಪಕ್ ರಾಜ್, ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಪ್ರೊಫೆಸರ್ ಈಶ್ವರ ಗೌಡ, ಘಟಕದ ನಿಕಟಪೂರ್ವ ಅಧ್ಯಕ್ಷ  ಜೆಸಿ ಪ್ರಸನ್ನ ಶೆಟ್ಟಿ, ಘಟಕದ ಕಾರ್ಯದರ್ಶಿ ಜೆಸಿ ಅಜಯ್ ಜೆ ಶೆಟ್ಟಿ, ಘಟಕದ ಅಧ್ಯಕ್ಷರಾದ ಜೆಸಿ ಭರತ್ ಶೆಟ್ಟಿ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ನಂತರ ವಲಯದ ಪ್ರಾವಿಷನಲ್ ತರಬೇತುದರಾದ ಜೆಸಿ ದೀಪಕ್ ರಾಜ್ ಇವರು ಸಮಯಪ್ರಜ್ಞೆ ಹಾಗೂ ಸಮಯ ಪಾಲನೆ ಈ ವಿಷಯದ ಮೇರೆಗೆ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮಡಂತ್ಯಾರ್ ಜೆಸಿಐ ಘಟಕದ ಪೂರ್ವ ಅಧ್ಯಕ್ಷರುಗಳು, ಸದಸ್ಯರು, ಕಾಲೇಜಿನ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here