ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಹಾಸಭೆ. ಸದಸ್ಯರಿಗೆ ಶೇ 25% ಡಿವಿಡೆಂಡ್ ಘೋಷಣೆ

0

ಮಡಂತ್ಯಾರು : ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಹಾಸಭೆಯು ಅಧ್ಯಕ್ಷ ಲೆನ್ಸಿ ಪಿಂಟೊರವರ ಅಧ್ಯಕ್ಷೆಯಲ್ಲಿ ಸೆ.11ರಂದು ಮಡಂತ್ಯಾರು ಚರ್ಚ್ ಸಭಾಂಗಣದಲ್ಲಿ ಜರಗಿತು.

ಸಂಘದಲ್ಲಿ 2021-22ಸಾಲಿನಲ್ಲಿ ವರ್ಷಾಂತ್ಯಕ್ಕೆ ಒಟ್ಟು 2538 ಸದಸ್ಯರು ರೂ.19.58ಕೋಟಿ ಪಾಲು ಬಂಡವಾಳ ಹೊಂದ್ದಿದ್ದು ರೂ.63.45ಕೋಟಿ ವ್ಯವಹಾರ ನಡೆಸಿ ಶೇ 100% ಸಾಲ ವಸಲಾತಿ ಗೊಂಡಿದ್ದು, ಆರ್ಥಿಕ ವರ್ಷದಲ್ಲಿ ರೂ.50.52ಲಕ್ಷ ಲಾಭಗಳಿಸಿದೆ ಎಂದರು. ಸದಸ್ಯರಿಗೆ ಶೇ 25% ಡಿವಿಡೆಂಡ್ ಘೋಷಿಸಿದರು. ಮುಖ್ಯಕಾರ್ಯನಿರ್ವಹಣ ಧಿಕಾರಿ ವಲೇರಿಯನ್ ಡಿಸೋಜ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಸಬೆಯಲ್ಲಿ ಲೆಕ್ಕ ಪರಿಶೋಧಕರನ್ನು ನೇಮಿಸಲಾಯಿತು. ಉಪನಿಬಂಧನೆಗಳ ತಿದ್ದುಪಡಿ, ಲಾಭ ವಿಂಗಡನೆ ನಡೆಯಿತು. ಸಭೆಯಲ್ಲಿ ಗೌರವಾಧ್ಯಕ್ಷರಾದ ವ.ಫಾ.ಲಾರೆನ್ಸ್ ಮಸ್ಕರೇನಸ್ ಮುಖ್ಯ ಸಲಹೆಗಾರರಾದ ಮೋನಪ್ಪ ಪೂಜಾರಿ ಕಂಡೆತ್ಯಾರ್, ವೃತ್ತಿಪರ ನಿರ್ದೆಶಕ ಲಿಯೋ ನೋರೋನ, ಪೇಲಿಕ್ಸ್ ಡಿ ಕೊಸ್ತ, ಉಪಾಧ್ಯಕ್ಷರಾದ ಹೆನ್ರಿ ಮೊರಾಸ್, ನಿರ್ದೇಶಕರಾದ ಸಿರಿಲ್ ಸಿಕ್ವೇರಾ, ವಿವೇಕ್ ವಿನ್ಸೆಂಟ್ ಪಾಯಿಸ್, ಜೋಯೆಲ್ ಮೆಂಡೋನ್ಸಾ, ಲಿಯೋ ರೊಡ್ರಿಗಸ್, ಗ್ರೆಗೊರಿ ಸೇರಾ, ರೊನಾಲ್ಡ್ ಸಿಕ್ವೇರಾ, ಹ್ಯೂ ಬರ್ಟ್ ಲೋಬೊ, ಸೆಲೆಸ್ತಿನ್ ಡಿಸೋಜ, ಗ್ರೇಸಿ ರೀಟಾ ರೆಬೆಲ್ಲೋ, ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ವ. ಫಾ. ಸ್ಟ್ಯಾನಿ ಪಿಂಟೊ, ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವ. ಫಾ. ಜೆರೊಮ್ ಡಿಸೋಜ, ಮುಖ್ಯ ಮಂತ್ರಿಗಳ ಅಧೀನ ಕಾರ್ಯದರ್ಶಿ ಅರುಣ್ ಫುಟರ್ಡೋ, ಸಂಜೀವ ಶೆಟ್ಟಿ ಮುಗೇರೋಡಿ, ನಿರ್ದೆಶಕ ಲಿಯೋ ರೊಡ್ರಿಗಸ್ ಸ್ವಾಗತಿಸಿದರು. ನಿರ್ದೆಶಕ ಜೋಯೆಲ್ ಮೆಂಡೋನ್ಸಾ ಧನ್ಯವಾದ ಅರ್ಪಿಸಿದರು. ಫ್ರಾನ್ಸಿಸ್ ವಿ. ವಿ. ನಿರೂಪಿಸಿದರು. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here