ವಾಣಿ ಪದವಿ ಕಾಲೇಜಿನಲ್ಲಿ ತರಬೇತಿ ಕಾರ್ಯಕ್ರಮ

0

 

ಬೆಳ್ತಂಗಡಿ:ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯ ಮಾನವಿಕ ಸಂಘದ ವತಿಯಿಂದ ಸ 9ರಂದು ಗಣಕ ವಿಜ್ಞಾನ ಉಪನ್ಯಾಸಕ ಮತ್ತು ಜೆಸಿಐ ನ ವಲಯ ತರಬೇತುದಾರರಾದ ಸುಧೀರ್ ಕೆ. ಎನ್ ವಿದ್ಯಾರ್ಥಿಗಳಿಗೆ Personal Grooming ಎಂಬ ವಿಷಯದ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತಮ್ಮ ಬಟ್ಟೆಗಳನ್ನು ಯಾವ ರೀತಿ ಸ್ವಚ್ಛವಾಗಿ ಉಡಬೇಕು ಮತ್ತು ಬಟ್ಟೆಗಳ ಬಗೆಗಿನ ಮಹತ್ವದ ಕುರಿತಾಗಿ ಸವಿಸ್ತಾರವಾಗಿ ತಿಳಿಹೇಳಿದರು. ಈ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ವಿಷ್ಣು ಪ್ರಕಾಶ್ ವಹಿಸಿದ್ದರು .ನೆರೆದಿರುವ ಸರ್ವರನ್ನು ಮಾನವಿಕ ಸಂಘದ ಮುಖ್ಯಸ್ಥರಾದ ರವಿಶಂಕರ್ ಸ್ವಾಗತಿಸಿದರು,ಶ್ರೀಮತಿ ರಕ್ಷಾ ವಂದಿಸಿದರು ಮತ್ತು ಕುಮಾರಿ ಅಮೃತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here