ಲಾಯಿಲ: ಓಂ ಶಕ್ತಿ ಗೆಳೆಯರ ಬಳಗ ಲಾಯಿಲ ಇದರ ವಾರ್ಷಿಕ ಮಹಾ ಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

0

ಲಾಯಿಲ:   ಓಂ ಶಕ್ತಿ ಗೆಳೆಯರ ಬಳಗ ಲಾಯಿಲ ಇದರ ವಾರ್ಷಿಕ ಮಹಾ ಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಸೆ.11  ರಂದು ಸದಾಶಿವ ಸಮಗಾರ ಕಕ್ಕೇನಾ ಇವರ ಅಧ್ಯಕ್ಷತೆಯಲ್ಲಿ ಲಾಯಿಲ ಗ್ರಾಮ ಪಂಚಾಯತ್ ನ ಭಾರತ್ ಮಾತಾ ಸಭಾ ಭವನದಲ್ಲಿ ನಡೆಯಿತು.

ಓಂ ಶಕ್ತಿ ಗೆಳೆಯರ ಬಳಗ ನವರಸ ಕಲಾವಿದರು ಇದರ ಸದಸ್ಯರು ಹಾಗೂ ಕಲಾವಿದರಾಗಿದ್ದ ದಿವಂಗತ ರಾಜೇಂದ್ರ ಮಾಪಲಾಡಿ ಯವರ ಆತ್ಮಕ್ಕೆ ಸದ್ಗತಿಯನ್ನು ಕೋರಿ ಸಾಮೂಹಿಕ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ಉದಯ್ ಕುಮಾರ್ ಲಾಯಿಲ ರವರು ತಂಡವನ್ನು ನೋಂದಾವಣೆ ಮಾಡುವ ಪ್ರಕ್ರಿಯೆಯ ಕುರಿತು ಮಾಹಿತಿಯನ್ನು ನೀಡಿದರು.

ನೂತನ ಅಧ್ಯಕ್ಷರಾಗಿ ಹರೀಶ್ ನಾಯ್ಕ್ ಕರ್ಪೆ, ಉಪಾಧ್ಯಕ್ಷರಾಗಿ ಕೆ. ಶಿವರಾಮ್ ಗೌಡ, ಸಂಚಾಲಕರಾಗಿ ಸುರೇಶ್ ಬರಮೇಲು, ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ್ ಬಿ. ಎಲ್, ಜೊತೆ ಕಾರ್ಯದರ್ಶಿಯಾಗಿ ಸುನಿಲ್, ಕೋಶಾಧಿಕಾರಿಯಾಗಿ ಶಶಿಕುಮಾರ್ ಲಾಯಿಲ, ಲೆಕ್ಕಪರಿಶೋಧಕರಾಗಿ ಪುಷ್ಪರಾಜ್ ಪಡ್ಲಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ರಾಜ್ ಕುಮಾರ್ ಲಾಯಿಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಸಂತ್ ರಾಣಿ, ಸಂಘಟನಾ ಕಾರ್ಯದರ್ಶಿಯಾಗಿ ಅರವಿಂದ ಲಾಯಿಲರನ್ನು ಆಯ್ಕೆ ಮಾಡಲಾಯಿತು.

ಕಲೆ, ಸಂಸ್ಕೃತಿ, ಕ್ರೀಡೆ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮುಖೇನ ಜನಪರ ಕಾಳಜಿಯನ್ನು ಹೊಂದಿರುವ ಓಂ ಶಕ್ತಿ ಗೆಳೆಯರ ಬಳಗವು ಜನರ ಆಶೋತ್ತಾರಗಳನ್ನು ಈಡೇರಿಸುವ ಭರವಸೆಯನ್ನು ಅಧ್ಯಕ್ಷರಾದ ಹರೀಶ್ ನಾಯ್ಕ್ ಕರ್ಪೆ ಯವರು ತಿಳಿಸಿದರು.

LEAVE A REPLY

Please enter your comment!
Please enter your name here