ಸೆ.15: ಇಂಜಿನಿಯರ್ ದಿನಾಚರಣೆ ಪ್ರಯುಕ್ತ ವಾಹನ ಜಾಥಾ: ಪತ್ರಿಕಾಗೋಷ್ಠಿ

0

ಬೆಳ್ತಂಗಡಿ : ಅಖಿಲಭಾರತ ಸಿವಿಲ್ ಇಂಜಿನಿಯರುಗಳ ಒಕ್ಕೂಟದ ( ಎಸಿಸಿಇ ) ಬೆಳ್ತಂಗಡಿ ಸೆಂಟರ್ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಜಂಟಿಯಾಗಿ ಸೆ.15 ರಂದು ಅಂಗ ಸಂಸ್ಥೆಯ ಜಂಟಿಯಾಗಿ ಇಂಜಿನಿಯರ್ಸ್ ಡೇ ಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಎಸಿಸಿಇ ಬೆಳ್ತಂಗಡಿ ಸೆಂಟರ್ ಅಧ್ಯಕ್ಷ ಜಗದೀಶ್ ಪ್ರಸಾದ್ ಎನ್. ಹೇಳಿದರು.

ಅವರು ಸೆ.12 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.  ಎಸಿಸಿಇ (ಐ) ಬೆಳ್ತಂಗಡಿ ಸೆಂಟರ್ ಅಖಿಲ ಭಾರತ ಸಿವಿಲ್ ಇಂಜಿನಿಯರ್ ಗಳ ಒಕ್ಕೂಟದ ಒಂದು ಅಂಗ ಸಂಸ್ಥೆ. ಕಳೆದ ಎಪ್ರಿಲ್ ನಲ್ಲಿ ಉದ್ಘಾಟನೆಗೊಂಡು 133 ಸಕ್ರಿಯ ಸಿವಿಲ್ ಇಂಜಿನಿಯರ್ ಸದಸ್ಯರುಗಳನ್ನು ಹೊಂದಿದೆ. ಸರ್.ಎಮ್.ವಿಶ್ವೇಶ್ವರಯ್ಯ ಅವರ 162 ನೇ ಜಯಂತಿ ಪ್ರಯುಕ್ತ ಆಚರಿಸುವ ಈ ಕಾರ್ಯಕ್ರಮದ ಪ್ರಯುಕ್ತ ಮಧ್ಯಾಹ್ನ 3 ಗಂಟೆಗೆ ಹಳೇಕೋಟೆ, ಬೆಳ್ತಂಗಡಿಯಿಂದ ಉಜಿರೆವರಗೆ ಬೃಹತ್ ವಾಹನ ಜಾಥಾ ಹಮ್ಮಿಕೊಳ್ಳಲಾಗಿದೆ. ಬಳಿಕ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಂಜೆ 5ರಿಂದ  ಸೆಂಟರಿನ ಸದಸ್ಯರಿಗೆ ತಾಂತ್ರಿಕ ಮಾಹಿತಿ ಕಾರ್ಯಾಗಾರವನ್ನೂ ಏರ್ಪಡಿಸಲಾಗಿದೆ.

ಈ ಕಾರ್ಯಾಗಾರವನ್ನು ಮಂಗಳೂರಿನ ಇಂಜಿನಿಯ‌ ಅನಿರುದ್ಧ ರಾವ್ ಅವರು ನಡೆಸಿಕೊಡಲಿದ್ದಾರೆ. ಅನಂತರ ರೋಟರಿ ಕ್ಲಬ್ ನ ಸಹಭಾಗಿತ್ವದಲ್ಲಿ ತಾಲೂಕಿನ ಇಬ್ಬರು ಹಿರಿಯ ಇಂಜಿನಿರುಗಳಾದ ಇಂಜಿನಿಯರ್‌ ನಾರಾಯಣ ಭಟ್ ಮತ್ತು ಇಂಜಿನಿಯರ್ ಸೀತಾರಾಮ ಶೆಟ್ಟಿ ಇವರನ್ನು ಗೌರವಿಸಲಾಗುವುದು. ನಂತರ ಮನೋರಂಜನಾ ಕಾರ್ಯಕ್ರಮವನ್ನು ಪುತ್ತೂರಿನ ರಾಜ್ಯ ಪ್ರಶಸ್ತಿ ವಿಜೇತ ಮುರಳಿ ಸಹೋದರರ ಡಾನ್ಸ್ ಕ್ರೂ ಹಾಗೂ ವಿದುಷಿ ಪೂಜಾ ಪ್ರಶಾಂತ್ ಮತ್ತು ವಿದೂಷಿ ಪ್ರತೀಕ್ಷ ಇವರು ಭರತನಾಟ್ಯವನ್ನೂ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿ ಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮ ಭಟ್, ಕಾರ್ಯದರ್ಶಿ ರಕ್ಷಾ ರಾಘ್ನೇಶ್, ಎಸಿಸಿ ಬೆಳ್ತಂಗಡಿ ಸೆಂಟರ್ ನ ಕಾರ್ಯದರ್ಶಿ ವಿದ್ಯಾ ಕುಮಾರ್ ಕೆ, ಕೋಶಾಧಿಕಾರಿ ಸುರೇಶ ಬಂಗೇರ ಎಂ. ಡಿ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here