ಕೆ ಎಸ್ ಎಂ ಸಿ ಎ – ಎಸ್ ಎಂ ವೈ ಎಂ ವತಿಯಿಂದ ಗಂಡಿಬಾಗಿಲನಲ್ಲಿ ಸರ್ವ ಧರ್ಮಿಯ ಓಣಂಆಚರಣೆ

0


ನೆರಿಯ : ಗಂಡೀಬಾಗಿಲು ಇಲ್ಲಿನ ಪ್ರತಿಷ್ಠಿತ ಸಂತ ತೋಮಸರ ದೇವಾಲಯದ ಕರ್ನಾಟಕ ಸಿರೋಮಲ ಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ಸಿರೋಮಲಬಾರ್ ಯೂತ್ ಮೂವ್ ಮೆಂಟ್ ಇದರ ಮುಂದಾಳತ್ವದಲ್ಲಿ ಓಣಂ ಆಚರಣೆಯನ್ನು ಅತ್ಯಂತ ವೈಶಿಷ್ಟ ಪೂರ್ವ ವಾಗಿ ಆಚರಿಸಲಾಯಿತು.

ಸಿಯೋನ್ ಆಶ್ರಮದ  ಪೌಲೊಸ್ ಯು ಸಿ ಅವರು ವಂದನಿಯ ಧರ್ಮಗುರುಗಳಾದ ಶಾಜಿ ಮಾತ್ಯು ಟ್ರಸ್ಟಿಗಳಾದ  ಸೇಬಾಸ್ಟಿನ್ ಎಂ ಜೆ,  ಬೇಬಿ ಸಿ ಎ,  ಆಗಸ್ಟಿನ್,  ಮಾತ್ಯು ಗ್ರಾಮ ಪಂಚಾಯತ್ ಸದಸ್ಯರಾದ  ತೋಮಸ್ ವಿ ಡಿ ಯೂತ್ ಮೂವ್ಮೆಂಟ್ ಅಧ್ಯಕ್ಷ ರಾದ  ಮಿಥುನ್ ಅಭಿಲಾಶ್, ಆಧರ್ಷ್, ಜೋಸೆಫ್ ಪಿ ಪಿ ಕೆ ಎಸ್ ಎಂಸಿಎ ಅಧ್ಯಕ್ಷರಾದ  ಬೇಬಿ ವಿ ಟಿ, ಸುಜನ್, ಮನೋಜ್ ಎಂ ಡಿ, ಶೈಬಿ ಮನೋಜ್ ಶಿಜು ಸಿ ವಿ ಶಿಜು ಪಿ ವಿ, ಪ್ರಜ್ವಲ್ ಮಾತ್ಯು ಮಾಜಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸೇಬಾಸ್ಟಿನ್ ವಿ ಟಿ ಮುಂತಾದವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

ವಿವಿಧ ಆಟೋಟ ಸ್ಪರ್ಧೆಗಳು, ಮನೋರಂಜನೆ ಸ್ಪರ್ಧೆಗಳನ್ನು ವಿವಿಧ ಪ್ರಾಯದ ಗ್ರಾಮಸ್ಥರಿಗಾಗಿ ಏರ್ಪಡಿಸಲಾಯಿತು. ನಂತರ ಮದ್ಯಾಹ್ನ ಸಾರ್ವಜನಿಕ ವಿಶೇಷ ಓಣಂ ರಸದೌತಣ ದಲ್ಲಿ ವಿವಿಧ ಗಣ್ಯರು ಗ್ರಾಮಸ್ಥರ ಜೊತೆಯಲ್ಲಿ ಭಾಗವಹಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಕುಶಲ , ಸದಸ್ಯ ರಾದ ಬಾಬಣ್ಣ ಪರ್ಪಳ ,ವೇದಾವತಿ, ಮೊಹಮ್ಮದ್, ದಿನೇಶ್ ನೆಕ್ಕರೆ,  ಸಚಿತ, ಮಾಜಿ ಸದಸ್ಯರು ಪಿ ಕೆ ರಾಜನ್, ಹಿರಿಯರಾದ ಪೆರ್ನೆ ಗೌಡ
ಪಿ ನ್ ರಾಜನ್ ಶಿವರಾಜನ್ ಅಣಿಯೂರ್ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here