ಸ್ಪಂದನಾ ಸೇವಾ ಸಂಘದ ವತಿಯಿಂದ ಕುಕ್ಕಳ ಗ್ರಾಮದ ದುಗ್ಗಮಾರುಗುಡ್ಡೆ ನಿವಾಸಿ ವೈಷ್ಣವಿ ಇವರಿಗೆ ಚಿಕಿತ್ಸಾ ನೆರವು

0

ಕುಕ್ಕಳ:   ಸ್ಪಂದನಾ ಸೇವಾ ಸಂಘದ 94ನೇ ಸೇವಾ ಯೋಜನೆಯ ಧನಸಹಾಯವನ್ನು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಅನಾರೋಗ್ಯದಿಂದ ಬಳಲುತ್ತಿರುವ ಕುಕ್ಕಳ ಗ್ರಾಮದ ದುಗ್ಗಮಾರುಗುಡ್ಡೆ ನಿವಾಸಿ ಮಾಧವ ಗೌಡರ ಮಗಳಾದ ಕುಮಾರಿ ವೈಷ್ಣವಿ ಇವಳ ಚಿಕಿತ್ಸಾ ಸಹಾಯಾರ್ಥವಾಗಿ ರೂ 15,000/- ದ ಚೆಕ್ಕನ್ನು ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ ಇವರ ಮೂಲಕ ಫಲಾನುಭವಿಯ ಮನೆಯವರಿಗೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿಯ ಅಧ್ಯಕ್ಷರಾದ ಪದ್ಮ ಗೌಡ ಬೆಳಾಲು ಮತ್ತು ನಿರ್ದೇಶಕರು ಹಾಗೂ ಸ್ಪಂದನಾ ಸೇವಾ ಸಂಘದ ಸಂಚಾಲಕರಾದ ಸುರೇಶ್ ಕೌಡಂಗೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here