ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ) ತೋಟತ್ತಾಡಿ , ಚಿಬಿದ್ರೆ ಇದರ ಮಾಸಿಕ ಸಭೆ

0

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ) ತೋಟತ್ತಾಡಿ , ಚಿಬಿದ್ರೆ ಇದರ ಮಾಸಿಕ ಸಭೆಯನ್ನು ಸಂಘದ ಅಧ್ಯಕ್ಷರಾದ ಶೇಖರ ಪೂಜಾರಿ ಕಳೆಂಜೊಟ್ಟು ಇವರ ಅಧ್ಯಕ್ಷತೆಯಲ್ಲಿ  ನಡೆಸಲಾಯಿತು.

ಸಂಘದ ಜಾಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಅವರ ಹೆಸರಿನಲ್ಲಿ ಅಂದಾಜು 50ಲಕ್ಷ ವೆಚ್ಚದಲ್ಲಿ ಬಿಲ್ಲವ ಸಮುದಾಯ ಭವನ ನಿರ್ಮಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಈ ವೆಚ್ಚವನ್ನು ಸಂಘ ಸಂಸ್ಥೆಗಳಿಂದ , ಸಮಾಜದ ಉದ್ಯಮಿಗಳಿಂದ, ಸರ್ಕಾರದಿಂದ , ಶಾಸಕರು ಮತ್ತು ವಿಧಾನಪರಿಷತ್ ಶಾಸಕರ ಪ್ರದೇಶಭಿವೃದ್ದಿ ನಿಧಿಯಿಂದ ಬಳಸುವ ಬಗ್ಗೆ ತಿರ್ಮಾನಿಸಲಾಯಿತು.

ಈ ಸಂದರ್ಭ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಶೇಖರ ಪೂಜಾರಿ ಕಳೆಂಜೊಟ್ಟು, ಕಾರ್ಯದರ್ಶಿ ಜಯಾನಂದ ಪೂಜಾರಿ ಡಿ.ಮಜಲು, ಕೋಶಾಧಿಕಾರಿ ರಮನಾಥ ಪೂಜಾರಿ ಮಾಪಲದಡಿ ,ಗೌರವ ಸಲಹೆಗಾರದ ತಿಮ್ಮಪ್ಪ ಪೂಜಾರಿ ಹಾರಗಂಡಿ, ಸನತ್ ಕುಮಾರ್ ಮೂರ್ಜೆ, ಯುವ ಬಿಲ್ಲವ ವೇದಿಕೆಯ ಉಪಾಧ್ಯಕ್ಷರಾದ ಶೇಖರ ಪೂಜಾರಿ ಅರ್ಬಿ, ಮಹಿಳಾ ಬಿಲ್ಲವ ವೇದಿಕೆಯ ಕೋಶಾಧಿಕಾರಿ  ಪ್ರಮೀಳಾ ಮನ್ನಡ್ಕ ಪಾದೆ, ಸದಸ್ಯರಾದ ನಿತೇಶ್ ಕಳೆಂಜೋಟ್ಟು , ನವೀನ್ ಬರಮೇಲು,ಸತೀಶ್ ಪೂಜಾರಿ ಮೂರ್ಜೆ,ಜಯರಾಮ ಬುಲಪ್ಪು, ಸಂಘದ ಮಾಜಿ ಅಧ್ಯಕ್ಷರಾದ ಸೀತಾರಾಮ ಕಜೆ , ಕೇಶವ ಪೂಜಾರಿ ಬರಮೇಲು,ಮಹಿಳಾ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷೆ ವಸಂತಿ ಡಿ.ಮಜಲು ಕಾರ್ಯಕಾರಣಿ ಸದಸ್ಯರಾದ ಶ್ರೀಮತಿ ಸುಮತಿ ಬರಮೇಲು ಉಪಸ್ಥಿತರಿದ್ದರು.

ಜಯಾನಂದ ಪೂಜಾರಿ ಡಿ.ಮಜಲು ಸ್ವಾಗತಿಸಿ , ಸನತ್ ಕುಮಾರ್ ಮೂರ್ಜೆ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here