ಬೆಳಾಲು: ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ ವತಿಯಿಂದ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಆಶ್ರಯದಲ್ಲಿ ಕೊಕ್ಕಡ ವಲಯ ಮಟ್ಟದ ಕಬಡ್ಡಿ ಪಂದ್ಯಾಟವು ಉಜಿರೆ ನ್ಯಾಚ್ಯುರೋಪತಿ ಕಾಲೇಜಿನ ಒಳಾಂಗಣದಲ್ಲಿ ಜರುಗಿತು.
ಹುಡುಗರು ಮತ್ತು ಹುಡುಗಿಯರ ವಿಭಾಗದಲ್ಲಿ ಈ ಪಂದ್ಯಾಟದಲ್ಲಿ ಇಪ್ಪತ್ತ ನಾಲ್ಕು ತಂಡಗಳು ಭಾಗವಹಿಸಿದ್ದವು. ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಲೈಮಾನ್ ಭೀಮಂಡೆ ದೀಪ ಬೆಳಗಿಸಿ, ಶುಭಹಾರೈಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಸಿಬ್ಬಂದಿ ರವಿಚಂದ್ರ ಜೈನ್ ಸ್ವಾಗತಿಸಿ ವಂದಿಸಿದರು. ಶಾರೀರಿಕ ಶಿಕ್ಷಣ ಶಿಕ್ಷಕ ಕೃಷ್ಣಾನಂದರು ಕಾರ್ಯಕ್ರಮ ನಿರ್ವಹಿಸಿದರು.
ಪುರಷರ ವಿಭಾಗದಲ್ಲಿ ಬೆಳಾಲು ಪ್ರೌಢಶಾಲಾ ತಂಡವು ಪ್ರಥಮ ಸ್ಥಾನವಾದರೆ, ಹುಡುಗಿಯರ ವಿಭಾಗದಲ್ಲಿ ಬದನಾಜೆ ಶಾಲೆಯು ಪ್ರಥಮ ಸ್ಥಾನವನ್ನು ಪಡೆಯಿತು.