ಗುರುವಾಯನಕೆರೆ ಸರ್ಕಾರಿ ಶಾಲೆಯಲ್ಲಿ ಗಿಡ ನಾಟಿ ಹಾಗೂ ಶ್ರಮದಾನ

0

ಮಡಂತ್ಯಾರು:   ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೆತ್ತರ ಇಲ್ಲಿ ಶಾಲಾಭಿವೃದ್ಧಿ ಸಮಿತಿ, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸೆ.11ರಂದು ನಡೆದ ಗಿಡ ನಾಟಿ ಹಾಗೂ ಶ್ರಮದಾನ ದಲ್ಲಿ ಮಡಂತ್ಯಾರು ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ತರಕಾರಿ ಗಿಡಗಳ ನಾಟಿ ಹಾಗೂ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಬಳಿಕ ಶಾಲಾ ಸುತ್ತ ಮುತ್ತ ಸ್ವಚ್ಛತಾ ಕಾರ್ಯ ಹಾಗೂ ಅಡಿಕೆ , ತೆಂಗು ಹಾಗೂ ಇತರ ಹಲವು ಗಿಡಗಳ ನಾಟಿ ಹಾಗೂ ಗಿಡಗಳಿಗೆ ಗೊಬ್ಬರ ಹಾಕುವ ಕಾರ್ಯದಲ್ಲಿ ಭಾಗವಹಿಸಲಾಯಿತು.

ಮಡಂತ್ಯಾರು ವಲಯ ಮೇಲ್ವಿಚಾರಕ ವಸಂತ ಕುಮಾರ್ ಹಾಗೂ ಶೇಖರ್ ರವರು ಭೇಟಿ ನೀಡಿ ಮಾರ್ಗದರ್ಶನ ನೀಡಿದರು. ಶಾಲಾ ಮುಖ್ಯಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಪೋಷಕರು ಶ್ರಮದಾನ ದಲ್ಲಿ ಭಾಗವಹಿಸಿದ್ದರು.

ಶೌರ್ಯ ಸ್ವಯಂ ಸೇವಕ ರಾದ ಬಾಲಕೃಷ್ಣ ಹಾರಬೆ, ಯೋಗೀಶ್ ಕೊಡ್ಲಕ್ಕೆ, ಸುಜೀತ್ ಕುಮಾರ್, ಬೇಬಿ, ಕು. ಶೋಭಾ, ಸಂಯೋಜಕರಾದ ಸತೀಶ್ ಆಚಾರ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here