ಕಾಶಿಪಟ್ಣ: ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ತರಬೇತಿ ಕಾರ್ಯಾಗಾರ

0

ಕಾಶಿಪಟ್ಣ:  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದ.ಕ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಥಾನ ಬೆಂಬಲ ಸಂಸ್ಥೆ – 2 ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ  ಕಾಶಿಪಟ್ಣ ಗ್ರಾಮ ಪಂಚಾಯತ್ ನಲ್ಲಿ ತರಬೇತಿ ಕಾರ್ಯಾಗಾರವನ್ನು ಸೆ.12ರಂದು  ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕಾಶಿಪಟ್ನ ಗ್ರಾಮ ಪಂಚಾಯತಿನ ಅಧ್ಯಕ್ಷೆ  ಶಿಲ್ಪ, ಪಂಚಾಯತ್ ಉಪಾಧ್ಯಕ್ಷ ಸತೀಶ್ ಬಂಗೇರ, ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಾದ ಜಯಶ್ರೀರವರು ಕಾರ್ಯಕ್ರಮವನ್ನು ಸ್ವಾಗತದ ಮೂಲಕ ಆರಂಭಿಸಿ ಗ್ರಾಮದಲ್ಲಿ ಜನರ ಸಹಭಾಗಿತ್ವ ದ ಬಗ್ಗೆ ಮಾತನಾಡಿದರು.

ಅನುಷ್ಠಾನ ಬೆಂಬಲ ಸಂಸ್ಥೆ- 2 ನ ಸಮುದಾಯ ಸಂಘಟಕರಾದ  ವಿಶಾಲಾಕ್ಷಿ ರವರು ಗ್ರಾಮ ನೈರ್ಮಲ್ಯ ಯೋಜನೆಯಲ್ಲಿ ಜನರಿಂದ ಮಾಹಿತಿ ಸಂಗ್ರಹಿಸಿ ಚರ್ಚೆ ಮಾಡಿಸಿದರು. ಈ ತರಬೇತಿಯಲ್ಲಿ ಪಂಚಾಯತ್ ಸದಸ್ಯರು, ಸರಕಾರಿ ಪ್ರೌಢ ಶಾಲೆಯ ಶಾಲಾ ಮುಖ್ಯೋಪಾಧ್ಯಾಯರುˌ ಸರಕಾರಿ ಪ್ರೌಡ ಶಾಲೆ ಕೇಳದ ಪೇಟೆ ಮುಖ್ಯೋಪಾಧ್ಯಾಯರು, ಪಂಚಾಯತ್ ಸಿಬ್ಬಂದಿ ವರ್ಗದವರು, ಸಮುದಾಯ ಆರೋಗ್ಯ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಗ್ರಂಥಾಲಯದ ಮೇಲ್ವಿಚಾರಕಿ  ಸುರೇಖಾ ವಂದಿಸಿದರು.

LEAVE A REPLY

Please enter your comment!
Please enter your name here