ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

0

ನಡ : ‌ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವು ದೇವಸ್ಥಾನದ ಶ್ರೀ ಅನಂತರತ್ನ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಸ. ಕಿ. ಪ್ರಾ. ಶಾಲೆ ಸುರ್ಯ, ಅಂಗನವಾಡಿ ಕೇಂದ್ರ ಸುರ್ಯ, ಹಾಗೂ ಅಂಗನವಾಡಿ ಕೇಂದ್ರ ಕನ್ಯಾಡಿ -1 ಇಲ್ಲಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಸುಭಾಶ್ಚಂದ್ರ ಸುರ್ಯಗುತ್ತು ಇವರು ಸಮವಸ್ತ್ರ ವಿತರಣೆ ನಡೆಸಿದರು. ವೇದಿಕೆಯಲ್ಲಿ ಡಾ. ಸತೀಶ್ಚಂದ್ರ. ಎಸ್, ಬಿ. ರಾಜಶೇಖರ ಅಜ್ರಿ, ಮತ್ತು ಸಂಗ್ರಾಮ್. ಎಸ್, ಗ್ರಾ. ಪಂ. ಸದಸ್ಯರಾದ ಸುಕೇಶ್ ಪೂಜಾರಿ, ಮತ್ತು ಶ್ರೀಮತಿ ಸುಮಿತ್ರಾ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಯಾ ಮತ್ತು ಅಂಗನವಾಡಿ ಶಿಕ್ಷಕಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here