ಇಳಂತಿಲ ಹಾಲು ಉತ್ಪಾದಕರ ಸಂಘದ ಮಹಾಸಭೆ: ಸದಸ್ಯರಿಗೆ ಶೇ.20 ಡಿವಿಡೆಂಟ್, ಶೇ.65 ಬೋನಸ್

0

ಇಳಂತಿಲ : ಇಳಂತಿಲ ಹಾಲು ಉತ್ಪಾದಕರ ಸಹಕಾರ ಸಂಘದ 2021-22 ನೇ ಸಾಲಿನ ಮಹಾ ಸಭೆ ಸಂಘದ ಅಧ್ಯಕ್ಷ ವಿಜಯ ಕುಮಾರ್ ಕಲ್ಲಳಿಕೆಯವರ ಅಧ್ಯಕ್ಷತೆ ಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಈ ವೇಳೆ ಅಧ್ಯಕ್ಷರು ಮಾತನಾಡಿ  ಗ್ರಾಮೀಣ ಭಾಗದ ಕೃಷಿಕರು ಹೈನುಗಾರಿಕೆಯಲ್ಲಿ ಹೆಚ್ಚಾಗಿ ತೊಡಗಿಸಿ ಕೊಂಡು ತಮ್ಮ ಆರ್ಥಿಕ ಬಲವನ್ನು ಹೆಚ್ಚಿಸಿಕೊಳ್ಳ ಬೇಕು, ಸದಸ್ಯರು ಉತ್ತಮ ಗುಣ ಮಟ್ಟದ ಹಾಲನ್ನು ಸಂಘಕ್ಕೆ ಪೂರೈಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಆರ್ಥಿಕ ವರ್ಷದಲ್ಲಿ ಸದಸ್ಯರಿಗೆ ಶೇ.20 ಡಿವಿಡೆಂಟ್ ಹಾಗು ಹಾಲಿನ ಪ್ರಮಾಣಕ್ಕೆ ಅನುಗುಣವಾಗಿ ಶೇ.65 ಬೋನಸ್ ಘೋಘಿಸಲಾಗಿದೆ ಎಂದರು.

180 ದಿನ ಹಾಲು ಪೂರೈಸಿದ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು. ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಪ್ರಸಾದ್ ನಾಯಕ್ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಾಬಲ ಶೆಟ್ಟಿ ವಾರ್ಷಿಕ ವರದಿ ಮಂದಿಸಿದರು. ಸಂಘದ ಉಪಾಧ್ಯಕ್ಷ ಕುನ್ಹ ಎಂ. ಎನ್,ನಿರ್ದೇಶಕರುಗಳಾದ ಪೆಲಪ್ಪಾರು ವೆಂಕಟ್ರಮಣ ಭಟ್, ಯಮುನಾ ಕೋಡಿಯಡ್ಕ, ಬಾಬು ಪೂಜಾರಿ, ದೇವಣ್ಣ ನಾಯ್ಕ, ಗಣೇಶ ನೀನಿ, ನಾರಾಯಣ ಗೌಡ, ತುಕ್ರಪ್ಪ ಗೌಡ, ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿಬ್ಬಂದಿಗಳಾದ ಜನಾರ್ದನ ಗೌಡ, ನಾರ್ಣಪ್ಪ ಎಂ. ಎನ್., ಐವನ್ ಡಿ ಸೋಜ, ಕೇಶವ, ಸತ್ಯನಾರಾಯಣ, ಉಮಾವತಿ ವಿವಿಧ ಕಾರ್ಯ ನಿರ್ವಹಿಸಿದರು, ನಿರ್ದೇಶಕ ಶಂಕರ ಭಟ್ ನಿಡ್ಡಾಜೆ ಸ್ವಾಗತಿಸಿ ವಿನ್ಸೆ0ಟ್ ಬ್ರಾಗ್ಸ್ ವಂದಿಸಿದರು.

LEAVE A REPLY

Please enter your comment!
Please enter your name here