ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು ಶಿಕ್ಷಕರ ದಿನಾಚರಣೆ

0

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ|ಬೇಸಿಲ್ ವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ,ವಿದ್ಯಾರ್ಥಿಯೊಬ್ಬನ ಸರಿ ತಪ್ಪುಗಳನ್ನು ಬೇರ್ಪಡಿಸಿ ಸನ್ಮಾರ್ಗದ ದಾರಿಗೆ ಕೊಂಡೊಯ್ಯುವವರು ಶಿಕ್ಷಕರು. ಗುರುಗಳ ಮಾತನ್ನು ಪಾಲಿಸಿದರೆ ಸಾಧನೆಯೆಡೆಗೆ ಹೋಗಲು ಸಾಧ್ಯ ಎಂದು ಅವರು ಹೇಳಿದರು.

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಲಿಯೋ ರೊಡ್ರಿಗಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ಉಪನ್ಯಾಸಕರಾದ ಲಿಯೋ ನೊರೊನ್ಹಾ ಶಿಕ್ಷಕರ-ವಿದ್ಯಾರ್ಥಿಗಳ ಬಾಂಧವ್ಯದ ಕುರಿತು ಮಾತನಾಡಿದರು , ವಿದ್ಯಾರ್ಥಿಗಳಾದ ಕಾವ್ಯ, ಜೀವನ್ ಗುರು ವಂದನೆಯನ್ನು ಸಲ್ಲಿಸಿದರು. ಜೊಯ್ಲಿನ್ ಲೋಬೊ ಸ್ವಾಗತಿಸಿ,ಭವಿಷ್ ವಂದಿಸಿದರು ,ದಿಶಲ್ ಪಿಂಟೋ ,ಮೆಲ್ರಾಯಿ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here