ನೆತ್ತರ ಶಾಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಹಾಗೂ ಊರವರಿಂದ ಶ್ರಮದಾನ

0

ಮಚ್ಚಿನ : ಸ. ಹಿ. ಪ್ರಾ. ಶಾಲೆ ನೆತ್ತರ ಶಾಲಾಭಿವೃದ್ಧಿ ಸಮಿತಿ, ಭಾಗ್ಯಶ್ರೀ ಮಿತ್ರ ಮಂಡಳಿ ನೆತ್ತರ, ನವೋದಯ ಸ್ವಸಹಾಯ ಸಂಘಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಡಂತ್ಯಾರು ವಲಯ ಮತ್ತು ಸ್ವಸಹಾಯ ಸಂಘಗಳು, ಮತ್ತು ಅಂಗನವಾಡಿ ಪೋಷಕರುಗಳು ಹಾಗೂ ಶಾಲಾ ವಿದ್ಯಾಭಿಮಾನಿಗಳ ಸಹಯೋಗದೊಂದಿಗೆ ಶಾಲೆಯಲ್ಲಿ ಶ್ರಮದಾನ ನಡೆಯಿತು.

ಈ ಶ್ರಮದಾನದ ಮೂಲಕ ಶಾಲೆ ಮತ್ತು ಅಂಗನವಾಡಿಯ ತರಕಾರಿ ತೋಟದ ರಚನೆ, 5 ತೆಂಗು ಸಸಿಗಳನ್ನು ನೆಟ್ಟು ನಮ್ಮ ಶಾಲಾ ಅಡಿಕೆ ತೋಟಕ್ಕೆ ಸೊಪ್ಪು ಹಾಕಿ ಗೊಬ್ಬರ ಹಾಕುವ ಕೆಲಸವನ್ನು ಬಹಳ ಯಶಸ್ವಿಯಾಗಿ ಮಾಡಿದರು.

ಮಾತ್ರವಲ್ಲದೇ ಶಾಲೆಯ ಸುತ್ತಮುತ್ತಲಿನ ಕಳೆಗಳನ್ನು ತೆಗೆದು ಶಾಲಾ ಪರಿಸರವನ್ನು ಸ್ವಚ್ಛ ಮಾಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ ಮೇಲ್ವಿಚಾರಕ ವಸಂತ ಕುಮಾರ್ ಮತ್ತು ಶೇಖರ್ ಇವರ ಶ್ರಮದಾನದ ಕೆಲಸವನ್ನು ನೋಡಿ ಊರವರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

LEAVE A REPLY

Please enter your comment!
Please enter your name here