ಬೆಳ್ತಂಗಡಿ: ಶ್ರೀ ಧ ಆಂ ಮಾ ಶಾಲೆ ಬೆಳ್ತಂಗಡಿಯಲ್ಲಿ ಇಂಡಿಯನ್ ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟನೆ

0


ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕ ಸೆ.13ರಂದು ಪ್ರಾರಂಭಗೊಂಡಿತು.

ಜಿಲ್ಲಾ ಇಂಡಿಯನ್ ರೆಡ್ ಕ್ರಾಸ್ ಸದಸ್ಯರು, ಅಧ್ಯಕ್ಷರು ಜಿಲ್ಲಾ ಯುವ ರೆಡ್ ಕ್ರಾಸ್ ಕಮಿಟಿ , ರಾಜ್ಯ ಪ್ರಥಮ ಚಿಕಿತ್ಸೆಯ ಸದ್ಯಸರು ಆದ ಸಚೇತ್ ಸುವರ್ಣ ಆಗಮಿಸಿ ಜೂನಿಯರ್ ರೆಡ್ ಕ್ರಾಸ್, ಘಟಕವನ್ನು ಉದ್ಘಾಟಿಸಿದರು.

ರೆಡ್ ಕ್ರಾಸಿನ ಉದ್ದೇಶಗಳನ್ನು ಉದ್ದೇಶಿಸಿ ಮಾತನಾಡಿ ಸಮಾಜದ ಉತ್ತಮ ನಾಗರಿಕರನ್ನು ಹೊರ ತರಲು ರೆಡ್ ಕ್ರಾಸ್ ಕಮಿಟಿಯು ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ ಇದೊಂದು ಸಮಾಜದಲ್ಲಿ ಗುರುತಿಸಿಕೊಂಡಿರುವಂತಹ ಸಂಘಟನೆ ಪ್ರತಿ ಜಿಲ್ಲೆಯಲ್ಲೂ ರೆಡ್ ಕ್ರಾಸಿನ ಸದ್ಯಸರು ಆಗುತ್ತಿರುವುದು ಉತ್ತಮವಾದ ಬೆಳವಣಿಗೆ ಎಂದು ತಿಳಿಸಿದರು.

ಅಲ್ಲದೆ ಮಕ್ಕಳಲ್ಲಿ ರೆಡ್ ಕ್ರಾಸಿನ ಬಗ್ಗೆ ಹೊಸ ಅಭಿಪ್ರಾಯಗಳನ್ನು ಚಿಗುರಿಸಿ ಮಕ್ಕಳ ಮನವನ್ನು ಒಲಿಸಿದರು. ಇದೇ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜುಗಳ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಗಳಿಸಿದಂತಹ ಉದ್ಘಾಟಕ ರಾಗಿ ಆಗಮಿಸಿದ ಸಚೇತ್ ಸುವರ್ಣ ಇವರನ್ನು ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಚೈತನ್ಯ ಸ್ವಾಗತವನ್ನು ಆಲಮ್ ಶೇಕ್ ಧನ್ಯವಾದವನ್ನು ಸುಶಾ ಜಿ ಸುವರ್ಣ ನೆರವೇರಿಸಿ ಕೊಟ್ಟರು.

ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಂ ಆರ್, ಜೂನಿಯರ್ ರೆಡ್ ಕ್ರಾಸ್ ಕೌನ್ಸಿಲರ್ ಶ್ರೀಮತಿ ಪ್ರಮೀಳಾ ಉಪಸ್ಥಿತರಿದ್ದರು. ಶಿಕ್ಷಕ  ಮಂಜುನಾಥ ಸಹಕರಿಸಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here