ಕೊಯ್ಯೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಸದಸ್ಯರಿಗೆ ಶೇಕಡಾ 10% ಡಿವಿಡೆಂಟ್ ವಿತರಣೆ

0

ಕೊಯ್ಯೂರು : ಕೊಯ್ಯೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಉಚಿತ ವೈದ್ಯಕೀಯ ಶಿಬಿರವು ಸಂಸ್ಥೆಯ ನಂದ ಗೋಕುಲ ಸಂಘದ ವಠಾರದಲ್ಲಿ ಸೆ.13 ರಂದು ಜರುಗಿತು.

ಸಂಘದ ಅಧ್ಯಕ್ಷ ಕೆ.ಕೃಷ್ಣ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ  ವನಿತಾ,  ನಿರ್ದೇಶಕರಾದ ದಿನೇಶ್ ಗೌಡ, ಉಮೇಶ್ ಎಂ. ಗೋಪಾಲಕೃಷ್ಣ ಗೌಡ, ಚಂದ್ರಶೇಖರ ಯು, ಜೆ.ವೆಂಕಪ್ಪ ಗೌಡ, ತಿಮ್ಮಯ್ಯ ಗೌಡ, ರಾಜು ಎನ್,ತಾರಾನಾಥ ಗೌಡ ಬಿ, ಗೀತಾ ರಾಮಣ್ಣ ಗೌಡ,  ರತ್ನ, ಕಾಂತಪ್ಪ ಗೌಡ,ದ.ಕ.ಹಾಲು ಉತ್ಪಾದಕರ ಸಂಘದ ವಿಸ್ತರಣಾ ಅಧಿಕಾರಿ ರಾಮೇಶ್ವರ ಕಾಮತ್, ಆದಿತ್ಯ ಸಿ,ಮಾರುಕಟ್ಟೆ ಅಧಿಕಾರಿ ರವಿ.ಎಮ್,ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಕುಮಾರಿ ಶಿಲ್ಪಾ ಸಭೆಯಲ್ಲಿ ಮಂಡಿಸಿದರು. ಹೈನುಗಾರಿಕೆಯಲ್ಲಿ ಉತ್ತಮ ಗುಣಮಟ್ಟದ ಹಾಲುನ್ನು ಪಡೆಯಲು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಹೆಚ್ಚಿನ ಆದಾಯ ಗಳಿಸುವ ಬಗ್ಗೆ ಡಾ.ಚಂದ್ರಶೇಖರ ಭಟ್ ಸಭೆಯಲ್ಲಿ ಮಾಹಿತಿ ನೀಡಿದರು.

ರಾಜ್ಯ ಪ್ರಶಸ್ತಿ ವಿಜೇತ ಕೊಯ್ಯೂರು ಫ್ರೌಡ ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ತಚ್ಚಮೆ, ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ಅಬ್ದುಲ್ ಹಾರೀಸ್,ದ.ಕ.ಹಾ.ಉ.ವಿಸ್ತಾರಣಾಧಿಕಾರಿಗಳಾದ ರಾಜೇಶ್ ಕಾಮತ್, ಆದಿತ್ಯ ಸಿ ವೇದಿಕೆಯಲ್ಲಿ ಸನ್ಮಾನಿಸಿದರು. ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳ,ಹಿರಿಯ ಹೈನು ಗಾರರನ್ನು ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಿದ ಸದಸ್ಯರನ್ನು, ಗೌರವಿಸಿದರು.

ಮಂಗಳೂರು ಅತ್ತಾವರ ಕೆ.ಎಂ.ಸಿ.ಆಸ್ಪತ್ರೆ ವೈದ್ಯಕೀಯ ನೇತೃತ್ವದಲ್ಲಿ ಸಂಘದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಿದರು. ಸಂಘದ ಸಿಬ್ಬಂದಿಗಳು, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here