ಸೌತಡ್ಕ ದೇವಸ್ಥಾನಕ್ಕೆ ಕೆನರಾ ಬ್ಯಾಂಕ್ ವತಿಯಿಂದ ರೂ 1 ಲಕ್ಷ 25 ಸಾವಿರ ಮೌಲ್ಯದ ಸೋಲಾರ್ ಬಿಸಿ ನೀರ ಸಿಸ್ಟಮ್ ಕೊಡುಗೆ

0

ಕೊಕ್ಕಡ: ಬಯಲು ಆಲಯವೆಂದೇ ಪ್ರಸಿದ್ಧಿ ಪಡೆದ ಸೌತಡ್ಕ ದೇವಸ್ಥಾನಕ್ಕೆ ಕೆನರಾ ಬ್ಯಾಂಕ್ ವತಿಯಿಂದ ಸೆಲ್ಕೋ ಕಂಪೆನಿಯ ರೂ 1 ಲಕ್ಷ 25 ಸಾವಿರ ಮೌಲ್ಯದ ಸೋಲಾರ್ ಬಿಸಿ ನೀರ ಸಿಸ್ಟಮ್ ನ್ನು ಸೆ.13 ರಂದು ಕೊಡುಗೆಯಾಗಿ ನೀಡಲಾಯಿತು.

ಕೆನರಾ ಬ್ಯಾಂಕ್  ಪುತ್ತೂರು ಡಿವಿಷನ್ ಎ ಜಿ ಎಂ   ನರೇಂದ್ರ ರೆಡ್ಡಿ , ಕೊಕ್ಕಡ  ಶಾಖಾ ವ್ಯವಸ್ಥಾಪಕ ಅಂಕಿತ್ ಸಿಂಗ್  ,  ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ,  ಸದಸ್ಯರಾದ ಪುರಂದರ ಕಡೀರ,  ಪ್ರಶಾಂತ್ ಪೂವಾಜೆ,  ಯಶೋಧ ಉಮೇಶ್ ಶಬರಾಡಿ,  ನವೀನ ಕಜೆ, ವಿಠ್ಠಲ ಕುರ್ಲೆ, ಕಾರ್ಯನಿರ್ವಾಹಣಾಧಿಕಾರಿ  ದಯಾನಂದ ಹೆಗ್ಡೆ, ಅರ್ಚಕರಾದ  ಗುರುರಾಜ್ ಉಪ್ಪಾರ್ಣ, ಹಿರಿಯರಾದ  ಕುಶಾಲಪ್ಪ ಗೌಡ ಪೂವಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here