ಸ ಪ ಪೂ ಕಾಲೇಜು ಕೊಯ್ಯೂರು ಮತ್ತು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಜಂಟಿ ಆಶ್ರಯದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಸಂವಹನ ಕೌಶಲ್ಯ ಮತ್ತು ಕ್ರಿಯಾಶೀಲತೆಯ ಕುರಿತು ತರಬೇತಿ

0

ಬೆಳ್ತಂಗಡಿ:   ಸರಕಾರಿ ಪದವಿ ಪೂರ್ವ ಕಾಲೇಜು ಕೊಯ್ಯೂರು ಮತ್ತು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಜಂಟಿ ಆಶ್ರಯದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಸಂವಹನ ಕೌಶಲ್ಯ ಮತ್ತು ಕ್ರಿಯಾಶೀಲತೆಯ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು  ಜೇಸಿ ಬೆಳ್ತಂಗಡಿ ಮಂಜುಶ್ರೀಯ ಘಟಕ ಅಧ್ಯಕ್ಷ ಪ್ರಸಾದ್ ಬಿಎಸ್ ರವರು ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಬಾಲಕೃಷ್ಣ ಬೇರಿಕೆಯವರು ಜೇಸಿ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ತರಬೇತಿಯ ಅಗತ್ಯವನ್ನು ತಿಳಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ರಾಜ್ಯಶಾಸ್ತ್ರ ಉಪನ್ಯಾಸಕ ಸಂತೋಷ್ ಕುಮಾರ್, ಕನ್ನಡ ಭಾಷಾ ಉಪನ್ಯಾಸಕ ರಶ್ಮಿದೇವಿ ಉಪಸ್ಥಿತರಿದ್ದರು.

ಜೇಸಿ ರಕ್ಷಿತ್ ಅಂಡಿಂಜೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಅರ್ಥ ಶಾಸ್ತ್ರ ಉಪನ್ಯಾಸಕಿ ತೃಪ್ತಿ ಧನ್ಯವಾದ ವಿತ್ತರು. ಜೆಸಿಐ ಭಾರತದ ವಲಯ ತರಬೇತಿದಾರರಾದ ಜೇಸಿ ಹೇಮಾವತಿ ಕೆ ತರಬೇತಿಯನ್ನು ನಡೆಸಿಕೊಟ್ಟರು. ಜೇಸಿ ಅವಿನಾಶ್ ರವರು ಮತ್ತು ಉಪನ್ಯಾಸಕಿ ಭವ್ಯ ಎಂ. ರವರು ಸಹಕರಿಸಿದರು.

LEAVE A REPLY

Please enter your comment!
Please enter your name here