ಬೆಳ್ತಂಗಡಿ ಲಾಯಿಲ ಸಿರಿ ಸಂಸ್ಥೆಯಲ್ಲಿ ಸಿರಿ ಧಾನ್ಯಗಳ ಕಾರ್ಯಗಾರ

0


ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಬಿ.ಸಿ ಟ್ರಸ್ಟ್ ಹಾಗೂ ಸಿರಿ ಧಾನ್ಯ ಸಂಸ್ಕರಣೆ ಘಟಕ ರಾಯಪುರ ಧಾರವಾಡ ವತಿಯಿಂದ ಸಿರಿ ಧಾನ್ಯ ಸಂಸ್ಕರಣ ಮತ್ತು ಮೌಲ್ಯವರ್ಧಿತ ಘಟಕ ವಿವಿಧ ಉತ್ಪನ್ನಗಳ ಕಾರ್ಯಗಾರ ಸೆ.14 ರಂದು ನಡೆಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಎಸ್.ಕೆ.ಡಿ.ಆರ್.ಡಿ.ಪಿ (ಬಿ.ಸಿ ಟ್ರಸ್ಟ್) ನ  ನಿರ್ದೇಶಕರು ಸತೀಶ್ ಶೆಟ್ಟಿ  ನಡೆಸಿಕೊಟ್ಟರು.

ಶ್ರೀ .ಧಮಂ ಗ್ರಾ. ಯೋ. ಮಾರುಕಟ್ಟೆ ಯೋಜನಾಧಿಕಾರಿ ರಮೇಶ್ ಕಾರ್ಯಗಾರವನ್ನು ನಡೆಸಿಕೊಟ್ಟರು. ಸಿರಿ ಧಾನ್ಯಗಳ ಮಹತ್ವ, ಸಿರಿ ಸಂಸ್ಥೆಗಳಿಂದ ಉತ್ಪನ್ನಗಳ ಮಾಹಿತಿ ಮತ್ತು ಅದರ ಉಪಯೋಗಗಳನ್ನು ತಿಳಿಸಿಕೊಟ್ಟರು.

ಸುರೇಂದ್ರ ಕುಮಾರ್ ಬೆಳ್ತಂಗಡಿ ಬಿ.ಸಿ ಟ್ರಸ್ಟ್ ಯೋಜನಾಧಿಕಾರಿ, ತರಬೇತಿ ಸಂಸ್ಥೆಯ ವ್ಯವಸ್ಥಾಪಕ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಮಾರುಕಟ್ಟೆ ಅಧಿಕಾರಿ ದ.ಕ ಜಿಲ್ಲೆ, ಸಂದೀಪ್.ಕೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here