ಬೆಳ್ತಂಗಡಿ: 183ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಮತ್ತು ಹಿರಿಯ ಛಾಯಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮ

0

ಬೆಳ್ತಂಗಡಿ: ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ-ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯ ಇದರ ವತಿಯಿಂದ 183ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಮತ್ತು ಹಿರಿಯ ಛಾಯಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮ ಸೆ.13ರಂದು ಛಾಯಾ ಭವನ ಗುರುವಾಯನಕೆರೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕ್ ಆಚಾರ್ಯ ವಹಿಸಿದ್ದರು.

183ನೇ ವಿಶ್ವ ಛಾಯಾಗ್ರಹಣದ ಬಗ್ಗೆ ವಲಯದ ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ ಮಾತನಾಡಿದರು. ಹಿರಿಯ ಛಾಯಾಗ್ರಾಹಕರಾದ ಕೆ ವಸಂತ ಶರ್ಮ ಉಜಿರೆ ಇವರನ್ನು ಮುಖ್ಯ ಅತಿಥಿಗಳಾದ ಸೀತಾರಾಮ ಬಿ ಶೆಟ್ಟಿ ವೈಭವ್ ಗುರುವಾಯನಕೆರೆ ಇವರು ಸನ್ಮಾನಿಸಿದರು.`

ಎಸ್ ಕೆ ಪಿ ಬೆಳ್ತಂಗಡಿಯ ವಲಯ ಗೌರವ ಉಪಸ್ಥಿತರಾಗಿ ಸುಬ್ರಹ್ಮಣ್ಯ ಕೆ.ಜಿ , ಗೌರವ ಸಲಹೆಗಾರರಾದ ಗೋಪಾಲ ಅಳದಂಗಡಿ, ಉಮೇಶ್ ಹಳೆಪೇಟೆ, ಸುಂದರ್ ಬೆಳ್ತಂಗಡಿ, ನಂದ ಕುಮಾರ್ ಉಜಿರೆ, ಜಗದೀಶ್ ಜೈನ್ ಧರ್ಮಸ್ಥಳ, ಸುರೇಶ್ ಕೌಡಂಗೆ, ವಲಯ ಪ್ರಧಾನ ಕಾರ್ಯದರ್ಶಿ ಹರ್ಷ ಬಳ್ಳಮಂಜ, ಕೋಶಾಧಿಕಾರಿ ಹರೀಶ್ ಕೊಳ್ತಿಗೆ , ಪದಾಧಿಕಾರಿಗಳು ಹಾಗೂ ಸರ್ವ ಸದ್ಸಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅದೃಷ್ಟ ಚಾಯಾಗ್ರಾಹಕರ ಆಯ್ಕೆ ನಡೆಸಲಾಯಿತು. ವಿಜೇತರಾದ ರಾಜೇಶ್ ಇವರಿಗೆ ಬಹುಮಾನ ವಿತರಿಸಲಾಯಿತು. ಹರ್ಷ ಬಳ್ಳಮಂಜ ಸ್ವಾಗತಿಸಿ, ನಿರೂಪಿಸಿದರು. ಪ್ರವೀಣ್ ಕೆದ್ದು ಧನ್ಯವಾದಗೈದರು.

 

 

 

LEAVE A REPLY

Please enter your comment!
Please enter your name here