ಇಳಂತಿಲ: ಜ್ಞಾನ ಭಾರತಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ 2022-23 ಪ್ರತಿಭಾ ಕಾರಂಜಿ, ಹೊಸ ಕಟ್ಟಡದ ಉದ್ಘಾಟನೆ

0

ಇಳಂತಿಲ : ಇಲ್ಲಿನ ಜ್ಞಾನ ಭಾರತಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ 2022-23 ಪ್ರತಿಭಾ ಕಾರಂಜಿಯೊಂದಿಗೆ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭವು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಸಮಾಜಸೇವಕ ಹಾಗೂ ಜ್ಞಾನ ಭಾರತಿ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಹುಸೈನ್ ಬಡೀಲ್ ಶಿಕ್ಷಣವು ಇಂದಿನ ಯುವ ಸಮೂಹಕ್ಕೆ ಅನಿವಾರ್ಯ ಹಾಗೂ ಶಿಕ್ಷಣ ಎಂಬುವುದು ಶಕ್ತಿಯಾಗಿದೆ ಎಂದು ತಿಳಿಸಿಕೊಟ್ಟರು.

ಮುಖ್ಯ ಅತಿಥಿ ಹಾಗೂ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅಮಿತಾ ಹರೀಶ್ ಅಧ್ಯಕ್ಷರು ಜ್ಞಾನ ಭಾರತಿ ರಕ್ಷಕ-ಶಿಕ್ಷಕ ಸಮಿತಿ ಅವರು ವಿದ್ಯಾರ್ಥಿಗಳ ಗೆಲುವಿಗಾಗಿ ಹಾರೈಸಿದರು,

ಇಳಂತಿಲ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್,ಶಾಲಾ ಸಂಚಾಲಕರಾದ ಅಬ್ಧುಲ್ ರವೂಫ್ ಯು.ಟಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಅರುಣಾ , ಸಮೂಹ ಸಂಪನ್ಮೂಲ ವ್ಯಕ್ತಿ ಮೊಹಮ್ಮದ್ ಶರೀಫ್ ಹಾಗೂ ದಿನೇಶ್ ,ಜ್ಞಾನ ಭಾರತಿ ಟ್ರಸ್ಟಿನ ಖಜಾಂಚಿ ಅಝೀಝ್ ನಿನ್ನಿಕ್ಕಲ್ ಹಾಗೂ ಸದಸ್ಯರಾದ ಸುಲೈಮಾನ್ ಬಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಸ್ವಾಗತವನ್ನು ಶಿಕ್ಷಕಿ ತನ್ಸೀರಾ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಸಂಪನ್ಮೂಲ ವ್ಯಕ್ತಿ ದಿನೇಶ್ ಅವರು ವಹಿಸಿದ್ದರು. ಪ್ರತಿಭಾ ಕಾರಂಜಿಯಲ್ಲಿ ಹಿರಿಯರ ವಿಭಾಗದಲ್ಲಿ
ಜ್ಞಾನ ಭಾರತಿ ಶಾಲೆಯು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ ಹಿರಿಯರ ವಿಭಾಗದಲ್ಲಿ 5 ಪ್ರಥಮ ,3 ದ್ವಿತೀಯ,1 ತೃತೀಯ ಸ್ಥಾನ ಹಾಗೂ ಕಿರಿಯರ ವಿಭಾಗದಲ್ಲಿ ಪ್ರಥಮ 4,ದ್ವಿತೀಯ 3 ಸ್ಥಾನವನ್ನು ಪಡೆದುಕೊಂಡಿದೆ.

ಹಿರಿಯರ ವಿಭಾಗದಲ್ಲಿ ಕನ್ನಡ ಕಂಠ ಪಾಠ ಅನೀಶಾ .ಬಿ ,ಇಂಗ್ಲಿಷ್ ಕಂಠ ಪಾಠದಲಿ ನಿಹಮ,ಹಿಂದಿ ಕಂಠ ಪಾಠದಲಿ ರುಕಯ್ಯ,ಧಾರ್ಮಿಕ ಪಠಣ ಅರೇಬಿಕ್ ಶನುಂ, ಚಿತ್ರಕಲೆ ಶಬರುಸ್ತ,ಪ್ರಥಮ ಸ್ಥಾನಿಗಳಾಗಿ ಛದ್ಮವೇಷ ಯು.ಟಿ ರಾಫೀಹ್,ಹಾಸ್ಯ ಶಾಝ್ ದ್ವಿತೀಯ ಸ್ಥಾನಿಗಳಾಗಿ ಬಾಷಣ ಉಝೈಫ ತೃತೀಯ ಸ್ಥಾನಿಯಾಗಿ ಗುರುತಿಸಿಕೊಂಡರು.

ಕಿರಿಯರ ವಿಭಾಗದಲ್ಲಿ ಇಂಗ್ಲಿಷ್ ಕಂಠ ಪಾಠ ರಫಾ ಬೇಗಂ,ಲಘು ಸಂಗೀತ ಮರ್ಝೀಯ,ಚಿತ್ರಕಲೆ ಅನ್ವಫ್,ಛದ್ಮವೇಷದಲಿ ಮಹಮ್ಮದ್ ನಹೀಮುದ್ದೀನ್ ಸಾಹಿಸ್ ಪ್ರಥಮ ಸ್ಥಾನಿಗಳಾಗಿ,ಧಾರ್ಮಿಕ ಪಠಣ ಅರೇಬಿಕ್ ಫಾತಿಮಾ,ಕಥೆ ಹೇಳುವುದು ಸಲೀತ್,ಆಶು ಭಾಷಣ ಅಂಜದ್ ದ್ವಿತೀಯ ಸ್ಥಾನಿಗಳಾಗಿ ವಿಧ್ಯಾರ್ಥಿಗಳು ಅಭೂತಪೂರ್ವ ಸಾಧನೆಯನ್ನು ಮಾಡಿದ್ದಾರೆ.

LEAVE A REPLY

Please enter your comment!
Please enter your name here