ನಿಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರಮದಾನ

0

ನಿಡಿಗಲ್  : ಸತ್ಯನಾರಾಯಣ ಭಜನಾಮಂದಿರ ನಿಡಿಗಲ್-ಕಲ್ಮಂಜ ಹಾಗೂ ಭಾರತೀಯ ಜನತಾ ಪಕ್ಷದ ನಿಡಿಗಲ್ ನ ಕಾರ್ಯಕರ್ತರು ನಿಡಿಗಲ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಹೊಂಡಗಳನ್ನು ಮುಚ್ಚುವ ಕಾಮಗಾರಿ ನಡೆಸಿದರು.

ವಾಹನ ಸವಾರರ ಪರದಾಟವನ್ನು ಗಮನಿಸಿ ಯಾವುದೇ ರೀತಿಯ ದುರ್ಘಟನೆಯಾಗದಂತೆ ಮುಂಜಾಗ್ರತೆ ವಹಿಸಿ ಶ್ರಮದಾನ ನೆರವೇರಿತು.

ಕಲ್ಮಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್ ಎಂ. ಕಲ್ಮಂಜ ಇವರ ನೇತೃತ್ವದಲ್ಲಿ ರಘು ಟಿ. ನಿಡಿಗಲ್, ಬಾಲಕೃಷ್ಣ ಶೆಟ್ಟಿ, ಮಂಜುನಾಥ ಶೆಟ್ಟಿ, ರಾಜ, ಕುಮಾರನಾಥ ಶೆಟ್ಟಿ, ಹಾಗೂ ಸಮಾಜ ಸೇವಕರಾದ ಹಮೀದ್ ರವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here