ವೇಣೂರು ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೆ ಮುಂಭಡ್ತಿ

0


ವೇಣೂರು: ವೇಣೂರು ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳು ಮುಂಭಡ್ತಿಗೊಂಡು ವೇಣೂರು ಠಾಣೆಗೆ ನಿಯೋಜನೆಗೊಂಡಿದ್ದು, ಸೆ. 8 ರಂದು ಅಧಿಕಾರ ವಹಿಸಿಕೊಂಡರು.

ಉಳ್ಳಾಲ, ಬಂಟ್ವಾಳ ಸಂಚಾರಿ ಠಾಣೆ, ಬಂಟ್ವಾಳ ನಗರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಹರೀಶ್ ವಿ. ಅವರು ಕಳೆದ 5 ವರ್ಷಗಳಿಂದ ವೇಣೂರು ಠಾಣೆಯಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಸಹಾಯಕ ಉಪ ನಿರೀಕ್ಷಕರಾಗಿ ಪದೋನ್ನತಿಗೊಂಡು ಮತ್ತೆ ವೇಣೂರು ಠಾಣೆಗೆ ನಿಯೋಜನೆಗೊಂಡಿದ್ದಾರೆ.

ಸುಬ್ರಹ್ಮಣ್ಯ ಠಾಣೆಯಲ್ಲಿ ಹಾಗೂ ನಕ್ಸಲ್ ನಿಗ್ರಹ ದಳದಲ್ಲಿದ್ದ ಪ್ರಶಾಂತ್ ಕುಮಾರ್ ಅವರು ವೇಣೂರು ಠಾಣೆಯಲ್ಲಿ ಕಳೆದ 8 ವರ್ಷಗಳಿಂದ ಕಾನ್ಸ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಇದೀಗ ಹೆಡ್ ಕಾನ್ಸ್‌ಸ್ಟೇಬಲ್ ಆಗಿ ಪದೋನ್ನತಿಗೊಂಡಿದ್ದು, ವೇಣೂರು ಠಾಣೆಗೆ ನಿಯೋಜನೆಯೊಂಡಿದ್ದಾರೆ.

LEAVE A REPLY

Please enter your comment!
Please enter your name here