ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದ ಸುಫಿಯಾನ್ ನನ್ನು ಪುನರ್ ವಸತಿ ಕಲ್ಪಿಸಿ ಮರಳಿ ಮನೆ ಸೇರಿಸಿದ ಸಿಯೋನ್ ಆಶ್ರಮ

0

ಬೆಳ್ತಂಗಡಿ: ಸುಫಿಯಾನ್ ಎಂಬ 15 ವರ್ಷ ಪ್ರಾಯದ ಬಾಲಕನು ಲಕ್ನೋದ ಗುಲ್ ಜಾಲ್ ನಗರ್ ಎಂಬಲ್ಲಿಂದ ಮೇ 15ರಂದು ನಾಪತ್ತೆಯಾಗಿದ್ದನು. ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದ ಸುಫಿಯಾನ್ ತಾನು ಎಲ್ಲಿಗೆ ಹೋಗುತ್ತಿದ್ದೇನೆಂಬ ಪರಿವೆಯೇ ಇಲ್ಲದೆ ಲಕ್ನೋದಿಂದ ದೆಹಲಿಗೆ ಬಂದು ದೆಹಲಿಯಿಂದ ಮಂಗಳೂರಿಗೆ ಬಂದಿರುತ್ತಾನೆ. ಅಲ್ಲಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಡುಪಿ ಇಲ್ಲಿಯ ಮುಖಾಂತರ ಸಿಯೋನ್ ಆಶ್ರಮಕ್ಕೆ ದಾಖಲು ಮಾಡಿಕೊಳ್ಳಲಾಯಿತು.

ಸಿಯೋನ್ ಆಶ್ರಮದಲ್ಲಿ ಸದ್ರಿ ಬಾಲಕನಿಗೆ ಕೌನ್ಸಿಲಿಂಗ್ ಮತ್ತು ಸೂಕ್ತ ಚಿಕಿತ್ಸೆ ನೀಡಲಾಯಿತು. ಸದ್ರಿ ಬಾಲಕನ ವಿಳಾಸವನ್ನು ಕಾಲಭಾಚಾರ್ ಪೊಲೀಸ್ ಠಾಣೆಯ ಸಹಾಯದಿಂದ ಸಿಯೋನ್ ಆಶ್ರಮದ ಟ್ರಸ್ಟಿ ಸದಸ್ಯರಾದ ಸುಭಾಷ್ ಯು.ಪಿ ಯವರ ನೇತೃತ್ವದಲ್ಲಿ ಪತ್ತೆ ಹಚ್ಚಿ ಸೂಫಿಯಾನ್ ಕುಟುಂಬಸ್ಥರಿಗೆ ವಿಷಯ ತಿಳಿಸಲಾಯಿತು.

ಮಾನಸಿಕ ಅಸ್ವಸ್ಥೆಯಿಂದ  ಪುನರರ್ವಸತಿ ಹೊಂದಿದ ಸುಫಿಯಾನ್ ರವರು ಮನೆಯವರ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿದ್ದರು. ಆ.30 ರಂದು ಸುಫಿಯಾನ್ ರವರ ಚಿಕ್ಕಪ್ಪ ಮಹಮ್ಮದ್ ಶಬೀರ್ ಮತ್ತು ಚಿಕ್ಕಮ್ಮ ಶಕೀನಾಬಾನುರವರು ಸಿಯೋನ್ ಆಶ್ರಮಕ್ಕೆ ಭೇಟಿ ನೀಡಿ ಸುಫಿಯಾನ್ ರವರನ್ನು ಕಂಡು ಸಂತೋಷಗೊಂಡಿದ್ದಾರೆ. ಸಿಯೋನ್ ಆಶ್ರಮದ ನಿಸ್ವಾರ್ಥ ಸೇವೆಗೆ ಮನದಾಳದ ಕೃತಜ್ಞತೆಯನ್ನು ಸಲ್ಲಿಸಿ ತನ್ನ ಮನೆ ಲಕ್ನೋದ ಗುಲ್ ಜಾನ್ ನಗರಕ್ಕೆ ಕರೆದುಕೊಂಡು ಹೋದರು.

LEAVE A REPLY

Please enter your comment!
Please enter your name here