ಶ್ರೀಧ.ಮ ಆಂಗ್ಲ ಮಾಧ್ಯಮ ಶಾಲೆ ಉಜಿರೆಯಲ್ಲಿ ಹಿಂದಿ ದಿವಸ್ ಆಚರಣೆ

0

ಉಜಿರೆ:   ಶ್ರೀ ಧ.ಮ ಆಂಗ್ಲ ಮಾಧ್ಯಮ ಶಾಲೆ ರಾಜ್ಯ ಪಠ್ಯಕ್ರಮ, ಉಜಿರೆ ಇಲ್ಲಿ ಹಿಂದಿ ದಿವಸ ಆಚರಣೆಯು ಸೆ. 14 ರಂದು ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ಧ.ಮಂ ಸೆಕೆಂಡರಿ ಶಾಲೆ ಉಜಿರೆಯ ಹಿಂದಿ ಅಧ್ಯಾಪಕ ಮೋನಪ್ಪ ಇವರು ಆಗಮಿಸಿದ್ದರು. ಅವರು ಹಿಂದಿ ದಿವಸದ ಮಹತ್ವ,ಹಿಂದಿ ಕಲಿಯುವ ಉದ್ದೇಶ ಈ ಬಗ್ಗೆ ಮಕ್ಕಳಿಗೆ ಸವಿವರವಾಗಿ ತಿಳಿಸಿದರು.

ಮಕ್ಕಳು ಹಿಂದಿ ಸುವಿಚಾರ, ಹಿಂದಿ ಹಾಡು ,ಹಿಂದಿ ಗಾದೆ ಮಾತು,ಹಿಂದಿಯ ಭಾಷೆಯ ಮಹತ್ವ ಈ ಕುರಿತಾದ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾ ಲಕ್ಷ್ಮಿ ನಾಯಕ್ ಉಪಸ್ಥಿತರಿದ್ದು, ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.

ಹಿಂದಿ ಅಧ್ಯಾಪಕರಾದ  ಸೋಮಶೇಖರ್ ಹಾಗೂ  ಸುಧಾರಾವ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ನಿನಾದ್ ಕಾರ್ಯಕ್ರಮದ ನಿರೂಪಿಸಿದರೆ, ಅನಘ ವಂದಿಸಿದರು.

 

LEAVE A REPLY

Please enter your comment!
Please enter your name here