ಸವಣಾಲು: ಮೇಲಂತಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ಕೊರಗಪ್ಪ ಪೂಜಾರಿ ಹೃದಯಾಘಾತದಿಂದ ನಿಧನ

0

ಸವಣಾಲು: ಸವಣಾಲು ಗ್ರಾಮದ ಪಲ್ಲದಡಿ ಮನೆ ನಿವಾಸಿ,ಮೇಲಂತಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ಕೊರಗಪ್ಪ ಪೂಜಾರಿ (58ವ) ಅವರು ಹೃದಯಾಘಾತದಿಂದ ಕಳೆದ ರಾತ್ರಿ ನಿಧನರಾದರು.

ಕೊರಗಪ್ಪ ಪೂಜಾರಿಯವರು ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಸವಣಾಲು ಬೀಡಿ ಕಂಟ್ರಾಕ್ಟರ್ ಉದ್ಯಮವನ್ನು ನಡೆಸುತ್ತಿದ್ದರು.ಇವರು ಪ್ರಗತಿಪರ ಕೃಷಿಕರಾಗಿ, ದಾನಿಯಾಗಿ ಸಮಾಜದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ಮೃತರು ಪತ್ನಿ ರೇವತಿ ಮಕ್ಕಳಾದ ಬೆನಿ ಪ್ರಸಾದ್,ಹೇಮಾಕ್ಷಿ, ಪೂಜಾ ಹಾಗೂ ಅಪರಾ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here